ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿಶ್ಲೇಷಣಾ ರಸಾಯನಶಾಸ್ತ್ರ ವಿಭಾಗವು ದಿನಾಂಕ 25-8-2020 ರಂದು “Opportunities in chemistry and Fundamentals of Research” ಎಂಬ ವಿಷಯದ ಮೇಲೆ ರಾಷ್ಠ್ರೀಯ ಮಟ್ಟದ ಆನ್ಲೈನ್ ಕಾರ್ಯಗಾರವನ್ನು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ   ಆಯೋಜಿಸಿದ್ದರು. ಸ್ವಾಗತ ಗೀತೆಯನ್ನು ಕು. ಪಲ್ಲವಿ  ಗಾಯತ್ರಿ ಹಾಡಿದರು.

ಕಾರ್ಯಾಗಾರದ ಕೋ-ಆರ್ಡಿನೇಟರ್ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಎನ್. ಕೆ. ನಾಯಕರವರು ಸ್ವಾಗತಿಸಿದರು. ಪ್ರಾಚಾರ್ಯ ಡಾ. ಎಸ್. ಎನ್. ಶೆಟ್ಟಿಯವರು, ಕಾಲೇಜಿನ ಹಳೇವಿದ್ಯಾರ್ಥಿ ನವ್ಯಾ ಭಟ್‍ರವರನ್ನು ಅಭಿನಂದಿಸಿ, ಈ ಆನ್ಲೈನ್ ಕಾರ್ಯಕ್ರಮದ ಸದುಪಯೋಗವನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

RELATED ARTICLES  ಗೋಕರ್ಣದ ಆಡಳಿತಾಧಿಕಾರಿಯವರ ಮೇಲೆ ಆಸಿಡ್ ದಾಳಿಗೆ ಸಂಚು: ಹೊರ ಬಿತ್ತು ಸ್ಪೋಟಕ ಮಾಹಿತಿ.

ಕಾರ್ಯಗಾರದ ಕನ್ವೇನರ್ ಆದ ಡಾ. ರೇವತಿ ನಾಯ್ಕರವರು ಸಂಪನ್ಮೂಲ ವ್ಯೆಕ್ತಿಯಾದ ಸೂರತ್ಕಲ್‍ನ ನೆಶನಲ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ (ಕರ್ನಾಟಕ) ರೀಸರ್ಚ ಸ್ಕೋಲರ್ ನವ್ಯಾ ಭಟ್ ಪರಿಚಯಿಸಿದರು. ಸಂಶೋಧಕಿ ನವ್ಯಾ ಭಟ್ ರವರು ರಸಾಯನಶಾಸ್ತ್ರದಲ್ಲಿ ಮಾಡಬಹುದಾದ ಸಾಧನೆಗಳ ಬಗ್ಗೆ ವಿವರಿಸಿದರು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ ನಂತರ ಎನ್ ಇ ಟಿ, ಜೆ ಆರ್ ಫ್ ಪಾಸಾಗುವ ಬಗ್ಗೆ ತಿಳಿ ಹೇಳಿದರು. ನಂತರ ಸಂಶೋಧನಯಲ್ಲಿ ತೊಡಗಿ, ಪೆಪರ್ ಬರೆಯುವ, ಪೆಟೆಂಟ್ ಪಡೆಯುವ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು. ವಿಷಯದ ಮಂಡನೆಯ ನಂತರ ಆನ್ಲೈನ್ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡರು. ಈ ಆನ್ಲೈನ್ ಕಾರ್ಯಗಾರದಲ್ಲಿ ಕಾಲೇಜಿನ ಒಟ್ಟೂ 94 ಸ್ನಾತಕ ಹಾಗೂ ಸ್ನಾತಲೋತ್ತರ ವಿದ್ಯಾರ್ಥಿಗಳು ಆನ್ಲೈನ್ ಕಾರ್ಯಕ್ರಮದ ವರ್ಚಸ್ಸು ಹೆಚ್ಚಿಸಿದರು. ಸ್ನೇಹಾ ಹೆಗಡೆ ವಂದಿಸಿದರು.




RELATED ARTICLES  ಭೀಕರ ಅಪಘಾತ : ಕಾರು ಚಾಲಕ ಸಾವು..?: ಮೂವರಿಗೆ ಪೆಟ್ಟು