ಹೊನ್ನಾವರ; ಪುರಾಣ ಪ್ರಸಿದ್ದ ಐತಿಹಾಸಿಕ ಸ್ಥಳವಾದ ರಾಮತೀರ್ಥ ಕೆರೆಗೆ ಈ ಹಿಂದೆ ಭೇಟಿ ನೀಡಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅಭಿವೃದ್ದಿ ಪಡಿಸುದಾಗಿ ಭರವಸೆ ನೀಡಿದ್ದರು. ಅಂತೆಯೇ ಕೆರೆಯ ಅಭಿವೃದ್ದಿಗೆ 20.40ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮಂಗಳವಾರ ಶಾಸಕರಯ ಗುದ್ದಲಿಪೂಜೆ ನೇರವೇರಿಸಿದರು. ಸದ್ಯ ಬಿಡುಗಡೆಯಾದ ಅನುದಾನ ಮೆಟ್ಟಿಲು ಹಾಗೂ ಕೆರೆಯ ದುರಸ್ತಿ ಬಗ್ಗೆ ಎನ್ನುವ ಮಾಹಿತಿ ದೊರೆತ ಬಳಿಕ ದೇವಾಲಯದ ಪುರೋಹಿತರು, ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಮಳೆಗಾಲದ ಸಮಸ್ಯೆಗೆ ಪರಿಹಾರ ಒದಗಿಸಲು ಮೊದಲು ಆದ್ಯತೆ ನೀಡುವಂತೆ ಮನವಿ ಮಾಡಿದರು. ಕೆಲ ದಿನಗಳ ಹಿಂದೆ ಆದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಹೊನ್ನಾವರ ಯುವ ಬ್ರೀಗೇಡ್ ಸದಸ್ಯರು ಎರಡು ವಾರಗಳ ಕಾಲ ಶ್ರಮದಾನದ ಮೂಲಕ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ತಾತ್ಕಲಿಕವಾಗಿ ಸಮಸ್ಯೆ ಬಗೆಹರಿಸಿದ್ದಾರೆ ಎನ್ನುವ ಮಾಹಿತಿಯನ್ನು ಶಾಸಕರ ಗಮನಕ್ಕೆ ತರಲಾಯಿತು. ಅಂತಿಮವಾಗಿ ಈಗ ಬಿಡುಗಡೆಯಾದ ಅನುದಾನದಿಂದಲೇ ತಡೆಗೋಡೆ ಹಾಗೂ ಇನ್ನಿತರ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

RELATED ARTICLES  ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಜಾತ್ರೆ ಪ್ರಯುಕ್ತ ‌ಲಡ್ಡು ಹಾಗೂ ರವಾ ಪ್ರಸಾದ‌ ತಯಾರಿಕೆಗೆ ಟೆಂಡರ್ ಆಹ್ವಾನ


ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ ನನ್ನ ಕ್ಷೇತ್ರಕ್ಕೆ ಸಚೀವ ಮಾಧುಸ್ವಾಮಿ ಅಗಮಿಸಿದಾಗ ೫೦ ಲಕ್ಷ ಅನುದಾನ ಮನವಿ ಮಾಡಲಾಗಿತ್ತು. ಕುಮಟಾ ಲಕ್ಷಣತೀರ್ಥಕ್ಕೆ ಹಾಗೂ ರಾಮತೀರ್ಥಕ್ಕೆ ಅನುದಾನ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿ ಹಣ ಅಗತ್ಯವಿಲ್ಲದೇ ಇರುವುದರಿಂದ ಎಲ್ಲಾ ಹಣವನ್ನು ಇದೇ ಭಾಗಕ್ಕೆ ನೀಡಲಾಗುವುದು. ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ದಿಗೆ ಒಂದು ಕೋಟಿಗೂ ಅಧಿಕ ಮೊತ್ತ ಬಿಡುಗಡೆಗೊಳಿಸಿ ಪ್ರಸಿದ್ದ ಪ್ರವಾಸಿ ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುದಾಗಿ ಭರವಸೆ ನೀಡಿದರು.

RELATED ARTICLES  ಜನರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ :ಕಾರವಾರದಲ್ಲಿ ಸಚಿವ ನಿತಿನ್ ಗಡ್ಕರಿ ಅಭಿಮತ


ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಪಟ್ಟಣ ಪಂಚಾಯತ ಸದಸ್ಯ ನಾಗಾರಾಜ ಭಟ್, ವಿಜಯ ಕಾಮತ್, ಮಹೇಶ ಮೇಸ್ತ, ಸುಬ್ರಾಯ ಗೌಡ,ಶ್ರೀಪಾದ ನಾಯ್ಕ, ಸುಜಾತ ಮೇಸ್ತ, ನಾಗರತ್ನ ಕೋನೇರಿ, ಮುಖಂಡರಾದ ಸುರೇಶ ಶೆಟ್ಟಿ , ಟಿ.ಎಸ್.ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿ,ರಘು ಪೈ ದತ್ತಾತ್ರೇಯ ಮೇಸ್ತ, ಸುರೇಶ ಶೇಟ್, ಯೋಗೀಶ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.