ಹೊನ್ನಾವರ: ತಾಲೂಕಿನ ಕಾವುರೂ ಗ್ರಾಮದ ಬಳಿ ಗುಡ್ಡ ಕುಸಿದು ಬೃಹತ್ ಗಾತ್ರದ ಬಂಡೆ ಉರುಳಿದ ಬಗ್ಗೆ ವರದಿಯಾಗಿದೆ.ಕಾವುರೂ ಗ್ರಾಮದ ಗಣಪತಿ ಗೌಡ ಅವರ ಮನೆ ಬಳಿ ಈ ಘಟನೆ ಸಂಭವಿಸಿದೆ.
ಒಂದು ದೊಡ್ಡ ಹಾಗೂ ಎರಡು ಸಣ್ಣ ಬಂಡೆಗಳು ಬಿದ್ದು ಮನೆಯಂಗಳದಲ್ಲಿದ್ದ ಕೊಟ್ಟಿಗೆಯ ಚಾವಣಿ ನೆಲಸಮವಾಗಿದೆ. ಉಳಿದಂತೆ ಹೆಚ್ಚಿನ ಅನಾಹುತಗಳಾಗಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ವಿವೇಕ ಶೇಣ್ವಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.