ದ್ವಿತೀಯ ಪಿಯುಸಿ ಪಾಸಾಗಿ ಇದೇ ಬರುವ ಸೆಪ್ಟೆಂಬರ್ 13ರಂದು ರಾಷ್ಟ್ರಮಟ್ಟದ ವೈದ್ಯಕೀಯ ಮತ್ತು ಆಯುಷ್ಯ ತರಬೇತಿಗೆ ಪ್ರವೇಶ ಪಡೆಯಲು ಅರ್ಹತೆಯ NEET ಪರೀಕ್ಷೆಗೆ ಸಿದ್ಧರಾಗುತ್ತಿರುವ ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅಂತಿಮಹಂತದ ಸಿದ್ಧತೆಯ ಕುರಿತಾದ ಉಚಿತ ತರಬೇತಿಯನ್ನು ನೀಡಲು ಕೊಂಕಣ ಎಜ್ಯುಕೇಷನ್ ಟ್ರಸ್ಟ್ ಕುಮಟಾ ಇವರು ನಿರ್ಧರಿಸಿದ್ದಾರೆ.
ರಾಜ್ಯದ ಹೆಸರಾಂತ ನುರಿತ ತರಬೇತುದಾರ ಉಪನ್ಯಾಸಕರು ಅಂತರ್ಜಾಲ ಮಾಧ್ಯಮದ ಮೂಲಕ ಈ ತರಬೇತಿಯನ್ನು ನೀಡಲಿದ್ದಾರೆ.
ದಿನಾಂಕ 28/08/2020 ರಂದು ಶುಕ್ರವಾರದಿಂದ ಈ ತರಬೇತಿಯನ್ನು ವ್ಯವಸ್ಥೆ ಮಾಡಲಾಗಿದ್ದು ದಿನಾಂಕ 10/09/2020 ರ ವರೆಗೆ ಈ ತರಬೇತಿಯನ್ನು ನೀಡಲಾಗುತ್ತದೆ.
ಪರೀಕ್ಷಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ.
ಸಂಪರ್ಕಿಸಬೇಕಾದ ಯೂಟ್ಯೂಬ್ ಲಿಂಕ್ https://www.youtube.com/channel/UC4jJz44aDxxnAcVvTL0JSlg