ಕುಮಟಾ: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಿ ಆ ಮೂಲಕ ಪ್ರಯೋಗ ಪರೀಕ್ಷೆಗೆ ತೊಡಗಿಕೊಳ್ಳುವಂತೆ ಮಾಡುವ ಮನೋಧರ್ಮಕ್ಕೆ ಒಗ್ಗಿಸಲು ಸಾಕಷ್ಟು ಅವಕಾಶಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿಯ ಶಿಕ್ಷಕವೃಂದಕ್ಕಿದೆ ಎಂದು ಅಶ್ವನಿಧಾಮ ಪಂಚ ಕೇಂದ್ರದ ಡಾ. ರವಿರಾಜ ಕಡ್ಲೆ ಅಭಿಪ್ರಾಯಪಟ್ಟರು. ಅವರು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ೫೦ ಸಾವಿರ ರೂ. ಮೌಲ್ಯದ ವಿಜ್ಞಾನ ಸಲಕರಣೆಗಳನ್ನು ಕೊಡುಗೆಯಾಗಿ ನೀಡುತ್ತಾ ಚಿಂತನಶೀಲ ಮನಸ್ಸು ಎಂಥಹ ಅನ್ವೇಷಣೆಗೂ ದಾರಿಯಾಗಬಹುದೆಂದು ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಬಣ್ಣಿಸಿದರು. ಕಳೆದ ವರ್ಷ ಕನ್ನಡ ಮಾಧ್ಯಮದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿ ಪ್ರಣೀತ ಕಡ್ಲೆ ಅಭಿನಂದನಾ ಸಮಾರಂಭದಲ್ಲಿ ಶಾಲೆಗೆ ವಿಜ್ಞಾನೋಪಕರಣಗಳನ್ನು ಕೊಡುಗೆಯಾಗಿ ನೀಡುವ ವಾಗ್ದಾನದಂತೆ, ಅಂದಿನ ಮುಖ್ಯಾಧ್ಯಾಪಕರ ಸಮ್ಮುಖದಲ್ಲಿ ಡಾ.ಕಡ್ಲೆಯವರು ಮಾತನಾಡಿದರು. ಅವಶ್ಯಕತೆಯುಳ್ಳ ವಿಜ್ಞಾನ ಸಾಮಗ್ರಿಗಳನ್ನು ನೀಡಿದ್ದಕ್ಕೆ ಅಭಿನಂದಿಸುತ್ತಾ, ಕಲಿಕೋಪಕರಣಗಳು ಮಕ್ಕಳ ಕೈಗೆಟುಕುವಂತಿದ್ದಾಗ ಮಾತ್ರ ಕಲಿಕಾ ಚಟುವಟಿಕೆಗೆ ಜೀವ ಬರುತ್ತದೆಂದು ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯ ಪಟ್ಟರು.

RELATED ARTICLES  ಸೆ.೨೬: ಚಂದ್ರಶೇಖರ ಪಡುವಣಿ ಅವರ ಎರಡು ಕೃತಿ ಬಿಡುಗಡೆ


ಪ್ರಭಾರ ಮುಖ್ಯಾಧ್ಯಾಪಕ ವಿ.ಎನ್.ಭಟ್ಟ ಡಾ. ರವಿರಾಜ ಅವರ ಆದರ್ಶವನ್ನು ಎತ್ತಿಹಿಡಿದು ಸ್ವಾಗತಿಸಿ, ಸನ್ಮಾನಿಸಿ ಮಾತನಾಡಿದರು. ವಿಜ್ಞಾನ ಸಂಘದ ಸಂಚಾಲಕ ಕಿರಣ ಪ್ರಭು ನಿರೂಪಿಸಿ ವಂದಿಸಿದರು. ಕುಮಾರ ಅದ್ವೈತ್ ಕಡ್ಲೆ, ಸುರೇಶ್ ಪೈ, ಅನಿಲ್ ರೊಡ್ರಿಗೀಸ್, ಪ್ರದೀಪ ನಾಯ್ಕ, ಭರತ ಭಟ್ಟ, ಪ್ರಶಾಂತ ಗಾವಡಿ, ಅಂಕಿತಾ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಶಿರಸಿಯಲ್ಲಿ ಶತಕದ ಗಡಿ ದಾಟಿದ ಡಿಸೇಲ್...!