ಕಾರವಾರ: ಜಿಲ್ಲೆಯಲ್ಲಿ ಇಂದು 198 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.ಕಾರವಾರದಲ್ಲಿ 12, ಅಂಕೋಲಾದಲ್ಲಿ 14, ಕುಮಟಾದಲ್ಲಿ 18, ಹೊನ್ನಾವರದಲ್ಲಿ 18, ಭಟ್ಕಳದಲ್ಲಿ 22, ಶಿರಸಿಯಲ್ಲಿ 16, ಸಿದ್ದಾಪುರದಲ್ಲಿ 13, ಯಲ್ಲಾಪುರದಲ್ಲಿ 12, ಮುಂಡಗೋಡಿನಲ್ಲಿ 5, ಜೊಯಿಡಾದಲ್ಲಿ 11 ಹಾಗೂ ಹಳಿಯಾಳದಲ್ಲಿ 57 ಮಂದಿಗೆ ಸೋಂಕು ದೃಢಪಟ್ಟಿದೆ.
ಮುಂಡಗೋಡ, ಹಳಿಯಾಳ ಹಾಗೂ ಕಾರವಾರದಲ್ಲಿ ತಲಾ ಓರ್ವ ಸೋಂಕಿತರು ಮೃತಪಟ್ಟಿದ್ದಾರೆ.
111 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 30, ಅಂಕೋಲಾದಲ್ಲಿ 6, ಹೊನ್ನಾವರದಲ್ಲಿ 1, ಶಿರಸಿಯಲ್ಲಿ 34, ಸಿದ್ದಾಪುರದಲ್ಲಿ 15, ಹಳಿಯಾಳದಲ್ಲಿ 25 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ 4,517 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 3,346 ಮಂದಿ ಗುಣಮುಖರಾಗಿದ್ದಾರೆ. 1,123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.