ಕುಮಟಾ: ಎರಡು ಕೋಮಿನ ಮೀನುಗಾರ ಮಹಿಳೆಯರ ನಡುವೆ ಬೆಟ್ಕುಳಿಯಲ್ಲಿ ಉದ್ಭವಿಸಿದ ವಿವಾದ ಇತ್ಯರ್ಥಗೊಂಡಿದೆ. ಜಿಪಂ ಸದಸ್ಯ ಪ್ರದೀಪ ನಾಯಕ ಅವರ ನೇತೃತ್ವದಲ್ಲಿ ಭಾನುವಾರ ವಿಷಯವನ್ನು ಇತ್ಯರ್ಥಮಾಡಲಾಗಿದೆ.
ತಾಲೂಕಿನ ಮೊರಬಾದಲ್ಲಿ ಹಿಂದು ಮತ್ತು ಅನ್ಯ ಕೋಮಿನ ಸಮುದಾಯದ ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರು. ಕೊರೊನಾ ಹಾವಳಿ ಜಾಸ್ತಿಯಾದ ಮೇಲೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಕೆಲವು ಮಹಿಳೆಯರು ಆ ಜಾಗ ಬಿಟ್ಟು, ಬೆಟ್ಕುಳಿಯಲ್ಲಿ ಮೀನು ವ್ಯಾಪಾರ ಮಾಡಲು ಶುರು ಮಾಡಿದ್ದರು. ಆದರೆ ಇತ್ತೀಚೆಗೆ ಬೆಟ್ಕುಳಿಗೆ ಆಗಮಿಸಿದ ಹಿಂದು ಸಮಾಜದ ಮೀನುಗಾರ ಮಹಿಳೆಯರು ವ್ಯಾಪಾರ ಮಾಡಲು ಮುಂದಾಗಿದ್ದರಿಂದ ಎರಡು ಕೋಮಿನ ಮಹಿಳೆಯರ ನಡುವೆ ಮೀನು ವ್ಯಾಪಾರ ಮಾಡುವ ಸಂಬoಧ ವಿವಾದ ಏರ್ಪಡಿತ್ತು.
ಈ ವಿವಾದ ಉಲ್ಭಣವಾಗಿ ಎರಡು ಕೋಮಿನ ನಡುವೆ ವೈಷಮ್ಯ ಮೂಡಿ, ಏನಾದರೂ ಅನಾಹುತ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಅಲ್ಲಿನ ಸ್ಥಳೀಯ ಪ್ರಮುಖರು ಜಿಪಂ ಸದಸ್ಯ ಪ್ರದೀಪ ನಾಯಕ ಅವರ ಗಮನಕ್ಕೆ ತಂದರು. ಇದೀಗ ಈ ವಿವಾದ ಅಂತ್ಯವಾಗಿದೆ.