ಕಾರವಾರ: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಪೋಲಿಸ್ ಠಾಣೆಯ ಅಧಿಕಾರಿಗಳು ಸೆಪ್ಟೆಂಬರ್ 1 ರಿಂದ 4ರವರೆಗೆ ವಿವಿಧ ಸ್ಥಳಗಳಲ್ಲಿ ಅಹವಾಲು ಸ್ವೀಕಾರ ಹಾಗೂ ಜನ ಸಂರ್ಪಕ ಸಭೆ ನಡೆಯಲಿದ್ದು ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ.
ಸೆಪ್ಟಂಬರ್ 1 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವೆಗೆ ಭಟ್ಕಳ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಹೊನ್ನಾವರ, 2 ರಂದು ಬೆಳೆಗ್ಗೆ 11 ರಿಂದ 1 ಗಂಟೆಯ ವರೆಗೆ ಕುಮಟಾ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಅಂಕೋಲಾ, 3 ರಂದು ಬೆಳಿಗ್ಗೆ 10 ರಿಂದ 12 ರ ವರೆಗೆ ಶಿರಸಿ, ಮಧ್ಯಾಹ್ನ 1 ಗಂಟೆಯಿಂದ 3 ರ ವರೆಗೆ ಮುಂಡಗೊಂಡ, ಸಂಜೆ 4 ರಿಂದ 6 ರ ವರೆಗೆ ಯಲ್ಲಾಪುರ, 4 ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ರವೆಗೆ ಜೋಯಿಡಾ, 3 ರಿಂದ ಸಂಜೆ 5 ರ ವರೆಗೆ ಹಳಿಯಾಳ ಪ್ರವಾಸ ಮಂದಿರದಲ್ಲಿ ಅಹವಾಲು ಸ್ವೀಕಾರ ನಡೆಯಲಿದೆ.