ಕಾರವಾರ: ಉತ್ತರಕನ್ನಡದಲ್ಲಿಂದು 109 ಜನರಿಗೆ ಕರೊನಾ ದೃಢವಾಗಿದೆ. ಕಾರವಾರದಲ್ಲಿ 11, ಅಂಕೋಲಾ 6, ಕುಮಟಾ 12, ಹೊನ್ನಾವರ 6, ಭಟ್ಕಳ 14, ಶಿರಸಿ 18, ಸಿದ್ದಾಪುರ 7, ಮುಂಡಗೋಡ 10, ಹಳಿಯಾಳ 20, ಜೋಯ್ಡಾದಲ್ಲಿ 5 ಕರೊನಾ ಪ್ರಕರಣ ದೃಢಪಟ್ಟಿದೆ.
ಕಾರವಾರ 5, ಅಂಕೋಲಾ 21, ಕುಮಟಾ 6, ಹೊನ್ನಾವರ 8, ಭಟ್ಕಳ 32, ಶಿರಸಿ 7, ಯಲ್ಲಾಪುರ 14, ಮುಂಡಗೋಡ 32, ಹಳಿಯಾಳಯಲ್ಲಿ 33 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ 180 ಮಂದಿ ಬಿಡುಗಡೆಯಾಗಿದ್ದಾರೆ.
ಇಂದು 109 ಪ್ರಕರಣ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,860ಕ್ಕೆ ಏರಿಕೆಯಾಗಿದೆ.