ಕಾರವಾರ : ಕಡ್ಡಾಯ ಕೋವಿಡ್ ಟೆಸ್ಟ್ ಗೆ ಎರಡು ಸಾವಿರ ಹಣ ಪಡೆದು ಗೀವಾ ಗಡಿಯೊಳಗೆ ಪ್ರವೇಶ ಪಡೆಯಬೇಕಿದ್ದ ನಿರ್ಬಂಧಗಳನ್ನು ಗೋವಾ ಸರಕಾರ ತೆರವುಗೊಳಿಸಿದೆ.

ಕೇಂದ್ರ ಸರ್ಕಾರ ಅಂತರ್ ರಾಜ್ಯ ಗಡಿ ಮುಕ್ತಗೊಳಿಸುವಂತೆ ಸೂಚನೆ ನೀಡಿದರೂ ಗೋವಾ ಸರ್ಕಾರ ತನ್ನ ರಾಜ್ಯಕ್ಕೆ ಬರುವವರಿಗೆ ನಿರ್ಬಂಧ ಹೇರಿತ್ತು‌.ನಿನ್ನೆ ದಿನ ಮಹಾರಾಷ್ಟ್ರ ಮೂಲದ ಪತ್ರಿಕೆಯ ಸಂದರ್ಶನದಲ್ಲಿ ಈ ಕುರಿತು ಪ್ರಸ್ತಾಪಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೆಪ್ಪೆಂಬರ್ 1 ರಿಂದ ಗೋವಾ ರಾಜ್ಯದ ಎಲ್ಲಾ ಗಡಿಯನ್ನು ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.

RELATED ARTICLES  ಕಾರವಾರ"ನಗರದ ಕ್ಯಥೆಡ್ರಲ್ ಚರ್ಚಿನಲ್ಲಿ "ಗುಡಫ್ರೈಡ ಆಚರಣೆ"

ಈ ಹಿನ್ನಲೆಯಲ್ಲಿ ಕರ್ನಾಟಕ -ಗೋವಾ ಗಡಿ ಜಿಲ್ಲೆಯ ಜನರಿಗೆ ಗೋವಾ ರಾಜ್ಯಕ್ಕೆ ಕೆಲಸ ನಿಮಿತ್ತ ಹೋಗಿ ಬರಲು ಕಷ್ಟಕರವಾಗಿತ್ತು. ಪ್ರತಿ ವ್ಯಕ್ತಿಗೆ ಎರಡುಸಾವಿರ ಹಣ ನೀಡಿ ಗೋವಾ ಪ್ರವೇಶಿಸುವುದೇ ದೊಡ್ಡ ಸಮಸ್ಯೆಯಾಗಿತ್ತು.

ಹೀಗಾಗಿ ಗೋವಾ ಗಡಿ ಭಾಗದ ಕಾರವಾರದ ವಾಟಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘವನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ಗೋವಾ ಸರ್ಕಾರಕ್ಕೆ ಮನವಿ ಮೂಲಕ ಗಡುವು ನೀಡಲಾಗಿತ್ತು.

RELATED ARTICLES  ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಮುಂಗಡ ಪತ್ರ 2019-20 ರ ಪ್ರದರ್ಶನ

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ರವರು ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು ಈ ವೇಳೆ ಸೆಪ್ಟಂಬರ್ ಒಂದರಿಂದ ಗೋವಾ -ಕರ್ನಾಟಕ ಗಡಿ ಮುಕ್ತಗೊಳಿಸುವ ಭರವಸೆ ನೀಡಿದ್ದರು.