ಕಾರವಾರ: ನಗರದ ವಿವಿಧ ಸ್ಥಳಗಳಲ್ಲಿ, ವಾರ್ಡ ಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಚುನಾಯಿತ ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ವಾರ್ಡಿನ ಸಮಸ್ಯೆ ಹಾಗೂ ಕಾರವಾರ ನಗರ ಅಭಿವೃಧ್ಧಿ ಬಗ್ಗೆ ಮನವಿ, ದೂರು, ಅರ್ಜಿ ಅಥವಾ ಕುಡಿಯುವ ನೀರು, ತೆರಿಗೆ, ಸಿವಿಲ್ ಕಾಮಗಾರಿ, ನೈರ್ಮಲ್ಯ (ಸ್ವಚ್ಚತೆ), ಬೀದಿ ದೀಪ ಇತ್ಯಾದಿ ವಿಷಯಗಳ ಬಗ್ಗೆ ಲಿಖಿತವಾಗಿ ಬರೆದು ತಿಳಿಸಬಹುದಾಗಿದೆ ಎಂದು ಕಾರವಾರ ನಗರ ಸಭೆಯ ಪೌರಾಯುಕ್ತರಾದ ಎಂ. ಪ್ರಿಯಾಂಗ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES  ಅಳ್ವೇಕೋಡಿಯಲ್ಲಿ ಮೊಳಗಿದ ‘ನಿನಾದ’ ಸುಗಮ ಸಂಗೀತ ಗಾಯನ


ಸೆ. 1 ರಂದು ವಾರ್ಡ ನಂ 1,2,3,10 ಗಳಿಗೆ ಸಂಬಂಧಿಸದಂತೆ ಕೊಡಿಬೀರ ದೇವಸ್ಥಾನ ಸಭಾಭವನದಲ್ಲಿ, 2 ರಂದು ವಾರ್ಡ ನಂ 4,5,12,14 ಸಂಬಂಧಿಸಿದಂತೆ ಜಿಲ್ಲಾ ರಂಗ ಮಂದಿರದಲ್ಲಿ, 3 ರಂದು ವಾರ್ಡ ನಂ 7,8,9 ಸಂಬಂಧಿಸದಂತೆ ಪಂಚರಿಷಿವಾಡ ಸಮುದಾಯ ಭವನ, 4 ರಂದು ವಾರ್ಡ ನಂ 11,13,18,20 ಕುರಿತು ಕೆ,ಎಚ್,ಬಿ ಕಾಲೋನಿ ಜ್ಞಾನಮಂದಿರ ಶಾಲೆಯಲ್ಲಿ, 5 ರಂದು ವಾರ್ಡ ನಂ 6,15,16,17,19,20 ಕುರಿತು ಮಹಾದೇವಸ್ಥಾನ ಸಭಾಭವನ, 7 ರಂದು ವಾರ್ಡ ನಂ 22,23,24,25 ಕುರಿತು ನಂದನಗದ್ದಾ ಅಂಬೇಡ್ಕರ ಭವನ, 8 ರಂದು ವಾರ್ಡ ನಂ 26,27,28 ಕುರಿತು ಸುಂಕೇರಿಯ ಕನ್ನಡ ಶಾಲೆಯಲ್ಲಿ ಸಂಜೆ 4 ರಿಂದ 6 ಗಂಟೆ ವರೆಗೆ ಜನಸ್ಪಂದನ ಕಾರ್ಯಕ್ರಮ ಜರುಗಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರವಾರ ನಗರ ಸಭೆಯೊಂದಿಗೆ ಸಹಕರಿಸುವಂತೆ ಈ ಮೂಲಕ ಕೋರಲಾಗಿದೆ.

RELATED ARTICLES  ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಜೀವ.