ಕಾರವಾರ: ಉತ್ತರಕನ್ನಡದಲ್ಲಿಂದು 106 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 11, ಅಂಕೋಲಾ 4, ಕುಮಟಾ 20, ಹೊನ್ನಾವರ 9, ಶಿರಸಿ 11, ಭಟ್ಕಳದಲ್ಲಿ 6, ಯಲ್ಲಾಪುರ 6, ಮುಂಡಗೋಡ 8 ಸೇರಿ ಒಟ್ಟು 106 ಕರೊನಾ ಪ್ರಕರಣ ದೃಢಪಟ್ಟಿದೆ.
ಇದೇ ವೇಳೆ ಇಂದು ಭಟ್ಕಳದಲ್ಲಿ ಒಂದು ಸಾವಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಾದ್ಯಂತ ಇಂದು ವಿವಿಧ ಆಸ್ಪತ್ರೆಯಿಂದ ಒಟ್ಟು 79 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 10, ಅಂಕೋಲಾ 16, ಕುಮಟಾ 2, ಹೊನ್ನಾವರ 3, ಭಟ್ಕಳ 23, ಶಿರಸಿ 5, ಹಳಿಯಾಳ 15, ಯಲ್ಲಾಪುರದಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು 106 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,966ಕ್ಕೆ ಏರಿಕೆಯಾಗಿದೆ. 482 ಸೋಂಕಿತರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.