ಗೋಕರ್ಣ ಅಶೋಕೆಯಲ್ಲಿ ವಿದ್ಯಾಚಾತುರ್ಮಾಸ್ಯ ಆಚರಿಸುತ್ತಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳನ್ನು ಸೋಮವಾರ ಸಂಸದ ಅನಂತಕುಮಾರ ಹೆಗಡೆ ಕುಟುಂಬದ ಸಮೇತ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಜೀಗಳು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ರೂಪುರೇಷೆ ಮತ್ತು ಉದ್ದೇಶಗಳನ್ನ ಸಂಸದರಿಗೆ ವಿವರಿಸಿದರು. ಮಾನ್ಯ ಸಂಸದರು ವಿಶ್ವ ವಿದ್ಯಾಪೀಠದ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ , ಹಿರಿಯ ಮುಖಂಡರಾದ ಪ್ರಮೋದ ಹೆಗಡೆ, ವಿನೋದ ಪ್ರಭು , ವೆಂಕಟ್ರಮಣ ಹೆಗಡೆ, ನಾಗರಾಜ ನಾಯಕ ತೊರ್ಕೆ , ಎನ್ ಎಸ್ ಹೆಗಡೆ, ಪ್ರೊ ಎಂ ಜಿ ಭಟ್ಟ , ತಾಲೂಕಾ ಪಂಚಾಯತ ಸದಸ್ಯ ಮಹೇಶ ಶೆಟ್ಟಿ, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಭಾರಿ ಮಂಜು ಜನ್ನು , ರಾಜೇಶ ಪೈ, ಹಾಗೂ ಹಲವು ಬಿಜೆಪಿ ಪದಾದಿಕಾರಿಗಳು , ಮುಖಂಡರು ಮತ್ತು ಶ್ರೀ ಮಠದ ಪದಾದಿಕಾರಿಗಳು ಉಪಸ್ಥಿತರಿದ್ದರು