ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 103 ಜನರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಾರವಾರದಲ್ಲಿ 6, ಅಂಕೋಲಾದಲ್ಲಿ 11, ಕುಮಟಾದಲ್ಲಿ 4, ಹೊನ್ನಾವರದಲ್ಲಿ 9, ಭಟ್ಕಳದಲ್ಲಿ 8, ಶಿರಸಿಯಲ್ಲಿ 25, ಸಿದ್ದಾಪುರ 3, ಯಲ್ಲಾಪುರದಲ್ಲಿ 1, ಮುಂಡಗೋಡಿನಲ್ಲಿ 6, ಹಳಿಯಾಳದಲ್ಲಿ 29 ಹಾಗೂ ಜೋಯಿಡಾದಲ್ಲಿ 1 ಮಂದಿಗೆ ಸೋಂಕು ದೃಢಪಟ್ಟಿದೆ.ಮುಂಡಗೋಡಿನಲ್ಲಿ ಕೊರೋನಾ ಸೋಂಕಿಗೆ ಒರ್ವ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 54ಕ್ಕೆ ಏರಿದೆ.
ಇಂದು 68 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಕಾರವಾರದಲ್ಲಿ 3, ಅಂಕೋಲಾದಲ್ಲಿ 5, ಹೊನ್ನಾವರದಲ್ಲಿ 27, ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 25, ಮುಂಡಗೋಡ 6 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ 5069 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 3811 ಮಂದಿ ಗುಣಮುಖರಾಗಿದ್ದಾರೆ. 1204 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.