ಕುಮಟಾ : ಕುಮಟಾ ತಾಲೂಕಿನ ಹೊಲನಗದ್ದೆ, ಮದ್ಗುಣಿ, ಪಡುವಣಿ, ಶೋಕನ್ಮಕ್ಕಿ, ಹಂದಿಗೋಣ, ನೆಲ್ಲಿಕೇರಿ, ಕಾಗಲ್, ಧಾರೇಶ್ವರ, ಬಾಡ, ಹೆರವಟ್ಟಾ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಹೊಲನಗದ್ದೆಯ 21 ವರ್ಷದ ಯುವಕ, ಹೊಲನಗದ್ದೆಯ 26 ವರ್ಷದ ಯುವಕ, ಮದ್ಗುಣಿಯ 16 ವರ್ಷದ ಬಾಲಕ, ಪಡುವಣಿಯ 30 ವರ್ಷದ ಮಹಿಳೆ, ಶೋಕನ್ಮಕ್ಕಿಯ 45 ವರ್ಷದ ಪುರುಷ, ಹಂದಿಗೋಣದ 77 ವರ್ಷದ ವೃದ್ಧೆ, ಹಂದಿಗೋಣದ 77 ವರ್ಷದ ವೃದ್ಧ, ನೆಲ್ಲಿಕೇರಿಯ 32 ವರ್ಷದ ಮಹಿಳೆ, ಕಾಗಲ್‌ನ 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಧಾರೇಶ್ವರದ 60 ವರ್ಷದ ಪುರುಷ, ಧಾರೇಶ್ವರದ 51 ವರ್ಷದ ಮಹಿಳೆ, ಕುಮಟಾದ 33 ವರ್ಷದ ಪುರುಷ, ಬಾಡದ 55 ವರ್ಷದ ಮಹಿಳೆ, ಹೆರವಟ್ಟಾದ 40 ವರ್ಷದ ಮಹಿಳೆ, ಹೆರವಟ್ಟಾದ 92 ವರ್ಷದ ವೃದ್ಧೆ, ಹೆರವಟ್ಟಾದ 57 ವರ್ಷದ ಪುರುಷ, ಕುಮಟಾದ 45 ವರ್ಷದ ಮಹಿಳೆ, ಕುಮಟಾದ 51 ವರ್ಷದ ಪುರುಷ, ಸಿದ್ಧನಬಾವಿಯ 15 ವರ್ಷದ ಬಾಲಕ, ಬಂಕಿಕೊಡ್ಲಾದ 75 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಹೊನ್ನಾವರ ಪಟ್ಟದ ಪ್ರಭಾತನಗರ, ಬಾಂದೆಹಳ್ಳ, ಗುಣಗುಣಕೇರಿ ಸೇರಿದಂತೆ ಪಟ್ಟಣವ್ಯಾಪ್ತಿಯಲ್ಲೇ ಏಳು ಪ್ರಕರಣ ಪತ್ತೆಯಾಗಿದೆ. ಗ್ರಾಮೀಣ ಭಾಗವಾದ ಕೆಕ್ಕಾರ, ನವಿಲಗೋಣ, ಕವಲಕ್ಕಿ, ಹಳದೀಪುರ ಭಾಗದಲ್ಲಿ 6 ಪ್ರಕರಣ ದೃಢಪಟ್ಟಿದೆ.

RELATED ARTICLES  ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉ. ಕ ಜಿಲ್ಲಾ ಸಂಚಾಲಕರಾಗಿ ದೀಪಕ್ ದೊಡ್ಡೂರ್ ಆಯ್ಕೆ.

ಪಟ್ಟಣದ ಪ್ರಭಾತನಗರದ ಗಂಡ ಮತ್ತು ಹೆಂಡತಿಯಲ್ಲಿ , 36 ವರ್ಷದ ಪುರುಷ, 30 ವರ್ಷದ ಮಹಿಳೆ, ಬಾಂದೆಹಳ್ಳದ ಒಂದೆ ಕುಟುಂಬದ ನಾಲ್ವರಲ್ಲಿ, 64 ವರ್ಷದ ಪುರುಷ, 58 ವರ್ಷದ ಮಹಿಳೆ, 30 ವರ್ಷದ ಯುವಕ, 26 ವರ್ಷದ ಯುವಕ, ಗುಣಗುಣಕೇರಿಯ 38 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಪೊಲೀಸ್ ಇಲಾಖೆಯ ಸ್ಫೋಟಕ ಪತ್ತೆ ವಿಭಾಗದ ಶ್ವಾನ ‘ಸೌಮ್ಯಾ’ ಅನಾರೋಗ್ಯದಿಂದ ಸಾವು.

ಗ್ರಾಮೀಣ ಭಾಗವಾದ ಕೆಕ್ಕಾರದ 62 ವರ್ಷದ ಮಹಿಳೆ. 26 ವರ್ಷದ ಯುವಕ, ಕವಲಕ್ಕಿಯ 55 ವರ್ಷದ ಮಹಿಳೆ, 25 ವರ್ಷದ ಯುವಕ, ಹಳದೀಪುರದ 45 ವರ್ಷದ ಪುರುಷ, ನವಿಲಗೋಣದ 37 ವರ್ಷದ ಪುರುಷ ಸೇರಿದಂತೆ ಒಟ್ಟು 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.