ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 181 ಕೋವಿಡ್-19 ಪ್ರಕರಣಗಳು ವರದಿಯಾಗಿದೆ.ಕಾರವಾರದಲ್ಲಿ 23, ಅಂಕೋಲಾದಲ್ಲಿ 38,ಕುಮಟಾದಲ್ಲಿ 35, ಹೊನ್ನಾವರದಲ್ಲಿ 30, ಭಟ್ಕಳದಲ್ಲಿ 14, ಶಿರಸಿಯಲ್ಲಿ 17, ಸಿದ್ದಾಪುರ 4, ಯಲ್ಲಾಪುರದಲ್ಲಿ 10, ಮುಂಡಗೋಡಿನಲ್ಲಿ 4, ಹಳಿಯಾಳದಲ್ಲಿ 14 ಹಾಗೂ ಜೋಯಿಡಾದಲ್ಲಿ 2 ಮಂದಿಗೆ ಸೋಂಕು ದೃಢಪಟ್ಟಿದೆ.

ಇಂದು 43 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಅಂಕೋಲಾದಲ್ಲಿ 3, ಕುಮಟಾದಲ್ಲಿ 4, ಶಿರಸಿಯಲ್ಲಿ 5, ಹಳಿಯಾಳದಲ್ಲಿ 2, ಮುಂಡಗೋಡ 21, ಹಾಗೂ ಜೋಯಿಡಾದಲ್ಲಿ 8 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯ 5369 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 3984 ಮಂದಿ ಗುಣಮುಖರಾಗಿದ್ದಾರೆ.

ಕುಮಟಾದಲ್ಲಿ ಕೊರೋನಾ ಅಬ್ಬರ
ಕುಮಟಾದ ದುಂಡಕುಳಿ, ಕಿಮಾನಿ, ಚಿತ್ರಗಿ, ನುಶಿಕೋಟೆ, ಹಂದಿಗೋಣ, ದಿವಗಿ, ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಕಂಡುಬಂದಿದೆ.

RELATED ARTICLES  ಕುಮಟಾ ಸನಿಹ ಬೈಕ್‍ಗಳ ನಡುವೆ ಅಪಘಾತ; ಮೂವರಿಗೆ ಗಂಭೀರ ಗಾಯ

ಹುಬ್ಬಣಗೇರಿಯ 50 ವರ್ಷದ ಪುರುಷ, ಕುಮಟಾದ 64 ವರ್ಷದ ಪುರುಷ, ಹುಬ್ಬಣಗೇರಿಯ 43 ವರ್ಷದ ಮಹಿಳೆ, ಕಿಮಾನಿಯ 57 ವರ್ಷದ ಪುರುಷ, ಕಿಮಾನಿಯ 49 ವರ್ಷದ ಪುರುಷ, ಕಿಮಾನಿಯ 56 ವರ್ಷದ ಪುರುಷ, ಕಿಮಾನಿಯ 2 ವರ್ಷದ ಮಗು, ಚಿತ್ರಗಿಯ 28 ವರ್ಷದ ಯುವಕ, ಕುಮಟಾದ 32 ವರ್ಷದ ಪುರುಷ, ದುಂಡಕುಳಿಯ 55 ವರ್ಷದ ಪುರುಷ, ದುಂಡಕುಳಿಯ 23 ವರ್ಷದ ಯುವತಿ, ದುಂಡಕುಳಿಯ 18 ವರ್ಷದ ಯುವತಿ, ದುಂಡಕುಳಿಯ 32 ವರ್ಷದ ಪುರುಷ, ದುಂಡಕುಳಿಯ 55 ವರ್ಷದ ಮಹಿಳೆ, ದುಂಡಕುಳಿಯ 9 ವರ್ಷದ ಬಾಲಕ, ದುಂಡಕುಳಿಯ 60 ವರ್ಷದ ಪುರುಷ, ದುಂಡಕುಳಿಯ 35 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.ಹೊಳೆಗದ್ದೆಯ 27 ವರ್ಷದ ಯುವಕ, ತೋರ್ಕೆಯ 30 ವರ್ಷದ ಪುರುಷ, ಹಂದಿಗೋಣದ 6 ವರ್ಷದ ಬಾಲಕಿ, ಸೋಕನ್ಮಕ್ಕಿಯ 68 ವರ್ಷದ ಮಹಿಳೆ, ಶೋಕನ್ಮಕ್ಕಿಯ 40 ವರ್ಷದ ಪುರುಷ, ದಿವಗಿಯ 34 ವರ್ಷದ ಮಹಿಳೆ, ಕುಮಟಾದ 55 ವರ್ಷದ ಮಹಿಳೆ, 83 ವರ್ಷದ ವೃದ್ಧ, 42 ವರ್ಷದ ಪುರುಷ, 8 ವರ್ಷದ ಬಾಲಕ, ಚಿತ್ರಗಿಯ 55 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಾಸೂರಿನ 26 ವರ್ಷದ ಯುವಕ, ಅಳ್ವೇಕೋಡಿಯ 60 ವರ್ಷದ ಪುರುಷ, ಚಿತ್ರಗಿಯ 22 ವರ್ಷದ ಯುವಕ, ಹಂದಿಗೋಣದ 17 ವರ್ಷದ ಬಾಲಕ, ಹಂದಿಗೋಣದ 67 ವರ್ಷದ ಪುರುಷ, ಹಂದಿಗೋಣದ 37 ವರ್ಷದ ಪುರುಷ, ನುಶಿಕೋಟೆಯ 60 ವರ್ಷದ ಮಹಿಳೆ, ನುಶಿಕೋಟೆಯ 67 ವರ್ಷದ ಪುರುಷ, ನುಶಿಕೋಟೆಯ 37 ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ.

RELATED ARTICLES  ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಚಾಂಪಿಯನ್.