ಕುಮಟಾ: ತಾಲೂಕಿನ ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರವೀಂದ್ರ ಭಟ್ಟ ಸೂರಿ ಉತ್ತರಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ರವೀಂದ್ರ ಭಟ್ಟ ಸೂರಿಯವರು ಸೃಜನಶೀಲ ಶಿಕ್ಷಕರಾಗಿದ್ದು ಶೈಕ್ಷಣಿಕ, ಸಾಹಿತ್ಯ, ಯೋಗದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, 3000 ಕ್ಕೂ ಅಧಿಕ ಕಾರ್ಯಕ್ರಮ ನಿರೂಪಣೆ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ, ಸರ್ಕಾರಿ ಶಾಲೆಯಲ್ಲಿ ಮಾಡಿದ ವಿಶೇಷ ಸಾಧನೆ,ಸಂಘಟನಾ ಚತುರತೆ ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವುದು ನಿಜಕ್ಕೂ ಶಿಕ್ಷಕ ವೃಂದ ಹೆಮ್ಮೆ ಪಡುವ ಸಂಗತಿಯಾಗಿದೆ.
ರವೀಂದ್ರ ಭಟ್ಟ ಸೂರಿಯವರ ಸಾಧನೆಯ ಹೆಜ್ಜೆ ಗುರುತು
- ಎಂ.ಕಾಂ.ಬಿ.ಪಿ.ಇಡಿ. ಪದವೀಧರರು
- ಶೈಕ್ಷಣಿಕ,ಸಾಮಾಜಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ.
- ಡಯಟ್ ಕುಮಟಾದಿಂದ 2019-20 ನೇ ಸಾಲಿನಲ್ಲಿ ” ಉತ್ತರಕನ್ನಡ ಜಿಲ್ಲಾ ಮಟ್ಟದ ಉತ್ತಮ ಪ್ರಾಯೋಗಿಕ ಶಾಲೆ ” ಪ್ರಶಸ್ತಿ.
- ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿಯಿಂದ “ಗೌರವ ಡಾಕ್ಟರೇಟ್ ಪ್ರಶಸ್ತಿ.”
- ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ.
- “ಕನ್ನಡ ರತ್ನ ಶಿಕ್ಷಕ “ಪ್ರಶಸ್ತಿ.
- ” ಗುರುಶ್ರೇಷ್ಠ” ಶಿಕ್ಷಕ ಪ್ರಶಸ್ತಿ.
- ಕಳೆದ 5 ವರ್ಷಗಳಲ್ಲಿ ಸಮುದಾಯದ ಸಹಕಾರದಿಂದ 24 ಲಕ್ಷ ರೂಪಾಯಿ ವೆಚ್ಚದಲ್ಲಿ “ಸುಸಜ್ಜಿತ ಶಾಲಾ ವಾಚನಾಲಯ, ವಿಜ್ಞಾನ ಪ್ರಯೋಗಾಲಯ, ನೂತನ ಕಂಪ್ಯೂಟರ್ ಕೊಠಡಿ, ಯೋಗ ಸಭಾಭವನ ಮುಂತಾದವುಗಳ ನಿರ್ಮಾಣ. ಸರ್ಕಾರಿ ಶಾಲೆಯೆಡೆ ಸಮುದಾಯ ಆಕರ್ಷಿತವಾಗುವಂತೆ ಮಾಡಿದ ಸಾಧನೆ.
ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಕ್ಲಾಸ್ ರೂಮ್, ಅಳವಡಿಸುವ ಮೂಲಕ ಆಕರ್ಷಕ ಕಲಿಕಾ ವಾತಾವರಣ ನಿರ್ಮಾಣ.
- ನಿತ್ಯ ನಿರಂತರ ಯೋಗ ತರಗತಿ, ಮಾಸದ ಪ್ರತಿಭೆ, ಪ್ರಕೃತಿಯಲ್ಲಿ ಕಲಿಕೆ, ತಿಂಗಳ ಹಕ್ಕಿಗಳ ಲೋಕ, ಮಾಸದ ಮಾತು ಮುಂತಾದ ನಾವಿನ್ಯಯುತ ಚಟುವಟಿಕೆಗಳ ಆಯೋಜನೆ.
- ಜಿಲ್ಲಾ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಾಲ್ಕು ಮೊಡ್ಯೂಲ್ಗಳಲ್ಲಿ ಕಾರ್ಯನಿರ್ವಹಣೆ.
- ರಾಜ್ಯದಾದ್ಯಂತ ವಿವಿಧ ಶಾಲಾ,ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ 100 ಕ್ಕೂ ಹೆಚ್ಚು ಶೈಕ್ಷಣಿಕ ಉಪನ್ಯಾಸ
3000 ಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ.
*ದೈಹಿಕ ಶಿಕ್ಷಕರ ಕೈಪಿಡಿ ಸೇರಿದಂತೆ ಒಟ್ಟೂ 5 ಕೃತಿಗಳ ಪ್ರಕಟಣೆ. ಮತ್ತೆ 5 ಕೃತಿಗಳು ಪ್ರಕಟಣೆಯ ಹಂತದಲ್ಲಿ.
*ತಾಲೂಕು,ಜಿಲ್ಲೆ,ವಿಭಾಗ ,ರಾಜ್ಯ ಮಟ್ಟದ ಕಾರ್ಯಕ್ರಮಗಳ ಯಶಸ್ವಿ ಆಯೋಜನೆ.
- ರೇಡಿಯೋ,ದೂರದರ್ಶನ ಸಂದರ್ಶನದಲ್ಲಿ ಭಾಗಿ.
- ತನ್ನ ಶಾಲಾ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಿ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವಂತೆ ಪ್ರೇರಣೆ.
- ರೂಪಕ, ನಾಟಕ, ಕಿರುಚಿತ್ರಗಳಲ್ಲಿ ಪಾತ್ರ.
- ಶೈಕ್ಷಣಿಕ ಗೋಷ್ಠಿಗಳಲ್ಲಿ ಭಾಗಿ.
ಹೀಗೆ ತನ್ನ ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಎಲ್ಲಾ ವಿಭಾಗಗಳಲ್ಲೂ ವಿಶೇಷ ಸಾಧನೆ ಮಾಡಿದವರು ಡಾ.ರವೀಂದ್ರ ಭಟ್ಟ ಸೂರಿ.
ಉತ್ತರ ಕನ್ನಡ ಜಿಲ್ಲಾ “ಉತ್ತಮ ಶಿಕ್ಷಕ”ಪ್ರಶಸ್ತಿ ಗೆ ಭಾಜನರಾದ ಡಾ.ರವೀಂದ್ರ ಭಟ್ಟ ಸೂರಿ ಅವರನ್ನು ಉಪನ್ಯಾಸಕ ಪ್ರೊ.ಎಮ್.ಜಿ.ಭಟ್ಟ ,ಲಯನ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ,ಸತ್ವಾಧಾರ ಫೌಂಡೇಶನ್ ನ ಗಣೇಶ ಜೋಷಿ ಸೇರಿದಂತೆ ಇನ್ನಿತರರು ಅಭಿನಂದಿಸಿ ಶುಭ ಕೋರಿದ್ದಾರೆ.