ಕಾರವಾರ: ನಗರದ ಗ್ರಾಮೀಣ ಪಿಎಸ್‍ಐ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆ ಮಾಡಿದ ಪ್ರಕರಣ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ನಗರದ ಗ್ರಾಮೀಣ ಠಾಣೆಯ ಪಿಎಸ್‍ಐ ರೇವಣಸಿದ್ದಪ್ಪ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅವರ ಫೇಸ್ಬುಕ್ ನಿಂದ ಫೋಟೊಗಳನ್ನು ಡೌನ್‍ಲೋಡ್ ಮಾಡಿಕೊಂಡು ನಕಲಿ ಖಾತೆಗೆ ಹಾಕಿ ರೇವಣ ಸಿದ್ದಪ್ಪ ಅವರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಅತೀ ಅರ್ಜೆಂಟ್ ಆಗಿ ಹಣ ಬೇಕು.
ನನ್ನ ಖಾತೆ ಅಥವಾ ಯುಪಿಐ ಮೂಲಕ ಹಣ ಹಾಕುವಂತೆ ಮೆಸೆಂಜರ್ ಮೂಲಕ ಸಂದೇಶ ಬಂದಿದೆ. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡುವಂತೆ ಕೇಳಿದ್ದಾರೆ. ನಕಲಿ ಫೇಸ್ ಬುಕ್ ಖಾತೆಯಿಂದ ಪಿಎಸ್‍ಐ ಸ್ನೇಹಿತನ ಜೊತೆಗೆ ಚಾಟ್ ಮಾಡಿದಾಗಿದೆ. ಅದರಲ್ಲೊಬ್ಬ ಅಧಿಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರಿಂದ ವಿಷಯ ತಿಳಿದು ಬಂದಿದೆ. ಅಷ್ಟರೊಳಗೆ ಸಾಕಷ್ಟು ಜನರು ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.