ಶಿರಸಿ: ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ತಂಡವನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ದರೋಡೆಗೆ ಬಳಸುವ ವಸ್ತುಗಳು ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ವಿದ್ಯಾ ನಗರದ ಕಸ್ತೂರಬಾ ನಗರದ ಮಹಮ್ಮದ್ ಯಾಸೀನ್ (23), ಮುರುಗೇಶ ಪೂಜಾರಿ (20), ಸವಣೂರಿನ ಮಯಾನಿ ಮೊಹಲ್ಲಾದ ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಗಾಂಧಿ ನಗರದ ಮರ್ದಾನ್ ಶಫಿಸಾಬ (19) ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ (19) ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಕೃತ್ಯದ ಮುಖ್ಯ ಆರೋಪಿಯಾಗಿದ್ದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ತಪ್ಪಿಸಿಕೊಂಡಿದ್ದಾನೆ.
ಇವರು ಮಾರಕಾಸ್ತ್ರಗಳಾದ ಬಡಿಗೆ, ರಾಡ್, ಖಾರದ ಪುಡಿ, ಚಾಕುವಿನೊಂದಿಗೆ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಖಾಡಕ್ಕಿಳಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.