ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 179ಜನರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಾರವಾರದಲ್ಲಿ 6,ಕುಮಟಾದಲ್ಲಿ 47, ಹೊನ್ನಾವರದಲ್ಲಿ 15, ಭಟ್ಕಳದಲ್ಲಿ 16, ಶಿರಸಿಯಲ್ಲಿ 03, ಸಿದ್ದಾಪುರ 21, ಯಲ್ಲಾಪುರದಲ್ಲಿ 9, ಮುಂಡಗೋಡಿನಲ್ಲಿ 27, ಹಳಿಯಾಳದಲ್ಲಿ 16, ಹಾಗೂ ಜೋಯಿಡಾದಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಶಿರಸಿಯಲ್ಲಿ ಕೊರೋನಾ ಸೋಂಕಿಗೆ ಒರ್ವ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 56ಕ್ಕೆ ಏರಿದೆ.
135 ಮಂದಿ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 11, ಅಂಕೋಲಾದಲ್ಲಿ 13, ಕುಮಟಾದಲ್ಲಿ 1, ಭಟ್ಕಳದಲ್ಲಿ 33, ಶಿರಸಿಯಲ್ಲಿ 10, ಸಿದ್ದಾಪುರದಲ್ಲಿ 16, ಯಲ್ಲಾಪುರದಲ್ಲಿ 12, ಹಳಿಯಾಳದಲ್ಲಿ 34, ಮುಂಡಗೋಡ 3, ಹಾಗೂ ಜೋಯಿಡಾದಲ್ಲಿ 2 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ 5548 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 4119 ಮಂದಿ ಗುಣಮುಖರಾಗಿದ್ದಾರೆ. 1374 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.