ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿ ಕೊರೋನಾ ಕಾಣಿಸಿಕೊಂಡಿದೆ.
ಇಂದು ಅಂದರೆ ಭಾನುವಾರ 238 ಕೋವಿಡ್-19 ಪ್ರಕರಣಗಳು ವರದಿಯಾಗಿದೆ.ಕಾರವಾರದಲ್ಲಿ 23, ಕುಮಟಾದಲ್ಲಿ 45, ಅಂಕೋಲಾ 21, ಹೊನ್ನಾವರದಲ್ಲಿ 28, ಶಿರಸಿಯಲ್ಲಿ 35, ಸಿದ್ದಾಪುರ 18, ಯಲ್ಲಾಪುರದಲ್ಲಿ 28, ಮುಂಡಗೋಡಿನಲ್ಲಿ 10, ಹಳಿಯಾಳದಲ್ಲಿ 26 ಹಾಗೂ ಜೊಯಿಡಾದಲ್ಲಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಹೊನ್ನಾವರದಲ್ಲಿ ಓರ್ವ ಮೃತಪಟ್ಟಿದ್ದು, ಈವರೆಗೆ 57 ಮಂದಿ ಮೃತಪಟ್ಟಿದ್ದಾರೆ.
ಈವರೆಗೆ ಜಿಲ್ಲೆಯ 5,999 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 4298 ಮಂದಿ ಗುಣಮುಖರಾಗಿದ್ದಾರೆ. 840 ಹೋಮ್ ಐಸೋಲೇಶನ್ ಹಾಗೂ 804 ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 1504 ಮಂದಿ ಸಕ್ರಿಯ ಸೋಂಕಿತರಿದ್ದಾರೆ.
97 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 4, ಕುಮಟಾದಲ್ಲಿ 9, ಭಟ್ಕಳ, ಶಿರಸಿಯಲ್ಲಿ ತಲಾ 22, ಹಳಿಯಾಳದಲ್ಲಿ 30 ಹಾಗೂ ಜೊಯಿಡಾದಲ್ಲಿ 10 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.