ಕುಮಟಾ : ಸೆಪ್ಟೆಂಬರ್ 5, ಮುಂಜಾನೆ 5.45 ಕ್ಕೆ ಹಳೆ ಬಸ್ಟ್ಯಾಂಡ್ನ ಆವಾರದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಹಿರಿಯ ಪತ್ರಿಕಾ ವಿತರಕ ಶ್ರೀ. ನಾರಾಯಣ ವೈದ್ಯರನ್ನು ಲೈನ್ಸ್ ಕ್ಲಬ್ ಕುಮಟಾ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಆಧ್ಯಕ್ಷೆ ವಿನಯಾ ಹೆಗಡೆ ಅವರು ನಾರಾಯಣ ವೈದ್ಯರ ಅನುಪಮ ಸೇವೆಗಾಗಿ ಅಭಿಮಾನದಿಂದ ಸನ್ಮಾನಿಸುತ್ತಿದ್ದೇವೆ ಎಂದರು.ಪತ್ರಿಕಾ ವಿತರಣೆ ಅತ್ಯಂತ ಕಷ್ಟದ ಕೆಲಸ,ಒಂದು ದಿನವೂ ರಜೆ ತೆಗೆದುಕೊಳ್ಳದೆ ಮಾಡುವ ಕಾಯಕ.ಅಷ್ಟೇನೂ ಆದಾಯ ತರುವಂತದ್ದಲ್ಲ.ಭ್ರಷ್ಟಾಚಾರ ಕ್ಕೆ ಅವಕಾಶವೇ ಇಲ್ಲ.ಇಂತಹ ಸೇವೆಯನ್ನು ಕಳೆದ 45 ವರ್ಷಗಳಿಂದ ನಡೆಸುತ್ತ ತಮ್ಮ ಬದುಕು ಕಟ್ಟಿಕೊಂಡ ನಾರಾಯಣ ವೈದ್ಯರ ಸಾಧನೆ ನಿಜಕ್ಕೂ ಶ್ಲಾಅಘನೀಯ ಎಂದರು.

RELATED ARTICLES  ಮನ-ಮನೆಗೆ ಚಿಟ್ಟಾಣಿ ಕೃತಿ 28ರಂದು ಬಿಡುಗಡೆ.

ಇದೇ ಸಂದರ್ಭದಲ್ಲಿ ಎಲ್ಲ 20 ಪತ್ರಿಕಾ ವಿತರಕರಿಗೆ ಫೇಸ್ ಶೀಲ್ಡ್ ವಿತರಿಸಲಾಯಿತು.ಲೈನ್ಸ್ ಕಾರ್ಯದರ್ಶಿ ಎಸ್.ಎಸ್.ಹೆಗಡೆ, ಹಿರಿಯ ಸದಸ್ಯ ಡಾ. ಪ್ರಕಾಶ ಪಂಡಿತ್ ಉಪಸ್ಥಿತರಿದ್ದರು.

RELATED ARTICLES  ನಾಳೆ ಉದಯ ಸಮೂಹ ಸಂಸ್ಥೆಯ ಸಂಸ್ಥಾಪನಾ ದಿನ: ಗ್ರಾಹಕರಿಗೆ ಬಹುಮಾನದ ಕೊಡುಗೆ.

ಬೆಳ್ಳಂಬೆಳಗ್ಗೆ 5.30 ಕ್ಕೆ,ವಿತರಕರೆಲ್ಲ ಸೇರುವ ಸಮಯಕ್ಕೇ ಅವರಿದ್ದಲ್ಲಿಗೆ ಹೋಗಿ ಅಭಿನಂದಿಸಿದ್ದಕ್ಕೆ ಶ್ರೀ ವೈದ್ಯರು ಹಾಗೂ ಅವರ ಸಹೋದ್ಯೋಗಿಗಳು ಲಯನ್ಸ್ ಕ್ಲಬ್ಗೆ ಕೃತಜ್ಞತೆ ಸಲ್ಲಿಸಿದ್ದು ವಿಶೇಷವಾಗಿತ್ತು.