ಇಂದು ಸನ್ಮಾನಿತರಾದ ಕ್ರೀಡಾಪಟುಗಳಂತೆ ಶಿರಸಿಯ ಹಾಗೂ ಜಿಲ್ಲೆಯ ಇನ್ನೂ ಹೆಚ್ಚಿನ ಪ್ರತಿಭೆಗಳು ಸ್ಕೇಟಿಂಗ್ ಕ್ರೀಡೆಯಲ್ಲಿ ಹೊರಹೊಮ್ಮಲಿ ಎಂದು ಶ್ರೀ ಕ್ಷೇತ್ರ ಸೋಂದೆಯ ಶ್ರೀ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರು ಆಶಿರ್ವದಿಸಿದರು.
ಶಿರಸಿಯ ಅದ್ವೈತ ಸ್ಕೇಟರ್ಸ ಎಂಡ್ ಸ್ಪೋರ್ಟ್ಸ್ ಕ್ಲಬ್ (ರಿ),ನ ಎಳು ವಿದ್ಯಾರ್ಥಿಗಳು ವಿಶಾಖಪಟ್ಟಣಂ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಹಾಕಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಿಂದ ಭಾಗವಹಿಸಿದ್ದು, ಆ ಕ್ರೀಡಾಪಟುಗಳನ್ನು ಸೋಂದೆಯ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರು ಸನ್ಮಾನಿಸಿದರು. ವಿದ್ಯಾರ್ಥಿಗಳಾದ ಮಾನ್ಯತಾ, ಉಜ್ವಲ, ನಾಗಪ್ರಸಾದ, ಆರುಷ, ಅರ್ಜುನ, ಪ್ರಮಥ ಹಾಗೂ ನಿಖಿಲ್ ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಕೇಟಿಂಗ್ ಬಾಲ ಪ್ರತಿಭೆ ಹಾಗೂ ಶಿರಸಿಯಲ್ಲಿ ಸ್ಕೇಟಿಂಗ್ ಆರಂಭವಾಗಲು ಮೂಲ ಕಾರಣೀಕರ್ತನಾದ ಕುಮಾರ ಅದ್ವೈತ ಕಿರಣಕುಮಾರ ಇತನನ್ನು ವಿಶೇಷವಾಗಿ ಸ್ವಾಮೀಜಿಯವರು ಸನ್ಮಾನಿಸಿದರು.
ಸ್ಕೇಟಿಂಗ್ ಕ್ಲಬಿನ ಹಿತೈಸಿಗಳಾದ ಶ್ರಿಮತಿ ಸುಲಕ್ಷಣಾ ಹಾಗೂ ಶ್ರೀ ವಿಶ್ವನಾಥ ದಂಪತಿಗಳನ್ನು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ಕೇಟಿಂಗ್ ಕ್ರೀಡಾಪಟು ಕುಮಾರಿ ಕೀರ್ತಿ ಹುಕ್ಕೇರಿ ಹಾಗೂ ರಾಷ್ಟ್ರೀಯ ಸ್ಕೇಟಿಂಗ್ ತರಬೇತುದಾರರಾದ ದಿಲೀಪ್ ಹಣಬರ್ ಇವರನ್ನು ಸ್ವಾಮಿಜಿಗಳು ಸನ್ಮಾನಿಸಿದರು.
ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ ರೋಲರ್ ಹಾಕಿ ಸ್ಕೇಟಿಂಗ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸ್ಕೇಟಿಂಗ್ ಕ್ರೀಡೆಯ ತರಬೇತಿ ಕಳೆದ ಮೂರು ವರ್ಷಗಳಿಂದ ಶಿರಸಿಯಲ್ಲಿಯೇ ನಡೆಯುತ್ತಿದೆ. ಜಿಲ್ಲೆಯಲ್ಲಿಯೇ ಸುಸಜ್ಜಿತ ವಿಶಾಲವಾದ ಸ್ಕೇಟಿಂಗ್ ಕ್ರೀಡಾಂಗಣ ಶಿರಸಿಯಲ್ಲಿದ್ದು ಈ ಪ್ರಯೋಜನವನ್ನು ಇತರೇ ವಿದ್ಯಾರ್ಥಿಗಳು ಪಡೆಯಬೇಕೆಂದರು. ಇದೇ ಸೆಪ್ಟೆಂಬರ್ 20 ರಿಂದ ಹೊಸ ಸ್ಕೇಟಿಂಗ್ ಬ್ಯಾಚುಗಳು ಆರಂಭವಾಗಲಿದ್ದು ಆಸಕ್ತರು 9886769539 ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ, ತರಬೇತುದಾರ ಶ್ಯಾಮಸುಂದರ ಹಾಗೂ ವಿದ್ಯಾರ್ಥಿಗಳ ಪಾಲಕ ಪೋಷಕರು ಉಪಸ್ಥಿತರಿದ್ದರು.