ಕಾರವಾರ: ದಿನೇ ದಿನೇ ಕೊರೋನಾ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನ ಕಬಂದ ಬಾಹು ಚಾಚುತ್ತಿದೆ. ಇಂದು 236 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 69, ಅಂಕೋಲಾ 33, ಕುಮಟಾ 30, ಹೊನ್ನಾವರ 27, ಭಟ್ಕಳ 1, ಶಿರಸಿ 4, ಸಿದ್ದಾಪುರ 32, ಯಲ್ಲಾಪುರ 24, ಹಳಿಯಾಳದಲ್ಲಿ 16 ಕೇಸ್ ದಾಖಲಾಗಿದೆ.

RELATED ARTICLES  ಇಳೆಗೆ ಇಳಿಯಿತು ಮಳೆ: ಅನ್ನದಾತನ ನಿಷ್ಟೆಯ ಕಾಯಕ ಚುರುಕು, ಹಸನುಗೊಳ್ಳುತ್ತಿದೆ ಕೃಷಿ ಭೂಮಿ.

ಅಂಕೋಲಾದಲ್ಲಿ ಮತ್ತು ಹೊನ್ನಾವರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

ಇಂದು ವಿವಿಧ ಆಸ್ಪತ್ರೆಯಿಂದ 82 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 13, ಅಂಕೋಲಾ 4, ಕುಮಟಾ 13, ಹೊನ್ನಾವರ 39, ಜೋಯ್ಡಾದಲ್ಲಿ ಇಬ್ಬರು ಬಿಡುಗಡೆಯಾಗಿದ್ದಾರೆ.

RELATED ARTICLES  165ನೇ ದಿನದ"ಗೋಕರ್ಣ ಗೌರವ"

ಇಂದು 236 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,336ಕ್ಕೆ ಏರಿಕೆಯಾಗಿದೆ. 1026 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.