ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 206 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಕಾರವಾರದಲ್ಲಿ 35, ಅಂಕೋಲಾದಲ್ಲಿ 17, ಹೊನ್ನಾವರದಲ್ಲಿ 6, ಶಿರಸಿ 21, ಸಿದ್ದಾಪುರ 9, ಯಲ್ಲಾಪುರದಲ್ಲಿ 10, ಮುಂಡಗೋಡಿನಲ್ಲಿ 31, ಹಳಿಯಾಳ 29, ಕುಮಟಾದಲ್ಲಿ 45, ಜೋಯ್ಡಾ 3 ಕೇಸ್ ದಾಖಲಾಗಿದೆ.
ಇಂದು 116 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಕಾರವಾರದಲ್ಲಿ 4, ಅಂಕೋಲಾದಲ್ಲಿ 5, ಕುಮಟಾ 9, ಶಿರಸಿ 4, ಸಿದ್ದಾಪುರ 18, ಯಲ್ಲಾಪುರದಲ್ಲಿ 32, ಹಳಿಯಾಳದಲ್ಲಿ 18, ಮುಂಡಗೋಡ 14, ಜೋಯಿಡಾ 12 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,542ಕ್ಕೆ ಏರಿಕೆಯಾಗಿದೆ. 791 ಮಂದಿ ಆಸ್ಪತ್ರೆಯಲ್ಲಿ, 1041 ಮಂದಿ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.