ಹೊನ್ನಾವರ ಹೊರಭಾಗ: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ಹಾಗೂ ಸ್ನೇಹಕುಂಜ ಟ್ರಸ್ಟ ಹೊನ್ನಾವರ ಇವರ ಸಂಯುಕ್ತಾಶ್ರಯದಲ್ಲಿ ಲೈಂಗಿಕ ಮತ್ತು ಪ್ರಜನನ ಆರೋಗ್ಯ, ಕೊರೊನಾ ವೈರಸ್ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಲೈಂಗಿಕ ಮತ್ತು ಪ್ರಜನನ ಆರೋಗ್ಯ, ಕೊರೊನಾ ವೈರಸ್‍ನ ಲಕ್ಷಣ ಮತ್ತು ತಡೆಗಟ್ಟುವ ಕ್ರಮ ಹಾಗೂ ಕುಟುಂಬ ಯೋಜನಾ ವಿಧಾನಗಳ ಕುರಿತಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್‍ನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಮಾಹಿತಿ ನೀಡಿದರು.
ಸ್ನೇಹಕುಂಜ ಟ್ರಸ್ಟನ ಸಮಾಜ ಕಾರ್ಯಕರ್ತೆಯಾದ ಶ್ರೀಮತಿ ಚಂದ್ರಕಲಾ ರವರು ಸ್ವಾಗತಿಸಿ ಟ್ರಸ್ಟನ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಿಳೆಯರ ಸ್ರ್ಕೀನಿಂಗ್ ಶ್ರೀಮತಿ ನಿರ್ಮಲಾ ಅಡ್ಪೇಕರ್ ಮಾಡಿದರು. ಮಿಸ್. ಗೌರಿ ಕೆ. ನಾಯ್ಕ ಸಹಕರಿಸಿದರು.