ಭಟ್ಕಳ : ಪಟ್ಟಣದ ಮುಖ್ಯರಸ್ತೆ ಬದಿಯ ಹಣ್ಣಿನಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಗುರುವಾರ‌ ರಾತ್ರಿ ಸಂಭವಿಸಿದೆ.

ಇದು ಅರ್ಬನ್ ಬ್ಯಾಂಕ್ ಎದುರಿಗಿರುವ ಗುಳ್ಮಿಯ ಮೆಹಬೂಬ್ ಅಲಿ ಎಂಬುವವರಿಗೆ ಸೇರಿದ ಹಣ್ಣಿನಂಗಡಿಯಾಗಿದೆ. ರಾತ್ರಿ ಸೊಳ್ಳೆ ಕಾಟ ತಪ್ಪಿಸಲು ಬತ್ತಿಯನ್ನ ಹಚ್ಚಿದ್ದರೆನ್ನಲಾಗಿದೆ. ಈ ವೇಳೆ ಅಂಗಡಿಯ ತಾಡಪತ್ರಿಗೆ ಬೆಂಕಿ ತಗುಲಿದ್ದರಿಂದ ಇಡೀ ಅಂಗಡಿಗೆ ಬೆಂಕಿ ಆವರಿಸಿಕೊಂಡಿದೆ. ಪರಿಣಾಮವಾಗಿ ಅಂಗಡಿಯಲ್ಲಿದ್ದ ವಿವಿಧ ತರಹದ ಹಣ್ಣು, ಹಣ್ಣಿನ ಬಾಕ್ಸ್ ಸುಟ್ಟು ಹೋಗಿದೆ.

RELATED ARTICLES  ನ.29 ಕ್ಕೆ ಕುಳ್ಳೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ