ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 145 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 21, ಅಂಕೋಲಾ 4, ಕುಮಟಾ 1, ಹೊನ್ನಾವರ 17, ಭಟ್ಕಳ 11, ಶಿರಸಿ 16, ಸಿದ್ದಾಪುರ 13, ಯಲ್ಲಾಪುರ 3, ಮುಂಡಗೋಡ 30, ಹಳಿಯಾಳ 19, ಜೋಯ್ಡಾದಲ್ಲಿ 10 ಪ್ರಕರಣ ದೃಢಪಟ್ಟಿದೆ.
ಕುಮಟಾ 1, ಶಿರಸಿ 1,ಮತ್ತು ಯಲ್ಲಾಪುರ,ಮುಂಡಗೋಡ, ಹಳಿಯಾಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನಸಂಖ್ಯೆ 79ಕ್ಕೆ ಏರಿಕೆಯಾಗಿದೆ.ಇಂದೇ 5 ಜನರ ಸಾವಾಗಿದೆ.
ವಿವಿಧ ಆಸ್ಪತ್ರೆಯಿಂದ 143 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 8, ಅಂಕೋಲಾ 34, ಭಟ್ಕಳ 22, ಹೊನ್ನಾವರ 5, ಶಿರಸಿ 6, ಸಿದ್ದಾಪುರ 12, ಯಲ್ಲಾಪುರ 12 ಸೇರಿದಂತೆ ವಿವಿಧೆಡೆಯಿಂದ ಒಟ್ಟು 143 ಮಂದಿ ಬಿಡುಗಡೆಯಾಗಿದ್ದಾರೆ.