ಕುಮಟಾ: ಪಟ್ಟಣದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಕಿರಾಣಿ ಅಂಗಡಿಗಳನ್ನು ವಾರಗಳ ಕಾಲ ಮುಚ್ಚಲು ಕಿರಾಣಿ ವ್ಯಾಪಾರಸ್ಥರ ಸಂಘ ತೀರ್ಮಾನಿಸಿದೆ.

ಪಟ್ಟಣದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕಿರಾಣಿ ಅಂಗಡಿಗಳನ್ನು ಸೆ.16ರಿಂದ 22ರವರೆಗೆ ಮುಚ್ಚಲಾಗುತ್ತಿದೆ. ಒಂದು ವಾರಗಳ ಕಿರಾಣಿ ಹೋಲ್ ಸೇಲ್ ಹಾಗೂ ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣ ಸ್ಥಗಿತಗೊಳಿಸುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಕಿರಾಣಿ ವ್ಯಾಪಾರಸ್ಥರ ಸಂಘ ಕೇಳಿಕೊಂಡಿದೆ.

RELATED ARTICLES  ಅಪಘಾತ : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿ ಸಾವು.

‘ನಮ್ಮಲ್ಲಿ ಕೆಲವು ವ್ಯಾಪಾರಸ್ಥರು ಸೋಂಕಿತರಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಿರಾಣಿ ಅಂಗಡಿಗಳನ್ನು ಮುಚ್ಚುತ್ತಿದ್ದೇವೆ. ಸಾರ್ವಜನಿಕರು ಸಹಕಾರ ನೀಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳಬೇಕು’ ಎಂದು ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶೇಷಗಿರಿ ಶಾನಭಾಗ ಕೋರಿದ್ದಾರೆ.

RELATED ARTICLES  ಸಾಧನೆ ಮಾಡಿದ ಉತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳು