ಕುಮಟಾ : ತಾಲೂಕಿನ ಕಿರಾಣಿ ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಸರಳ, ಸಜ್ಜನ ವೆಂಕಟೇಶ ನಾಗೇಶ ಶಾನಭಾಗ ಬಾಳೇರಿ ಇಂದು ನಿಧನರಾಗಿದ್ದಾರೆ.
ಇವರು ಕುಮಟಾ ತಾಲೂಕಿನ ಕಿರಾಣಿ ವರ್ತಕರ ಸಂಘದ ಅಧ್ಯಕ್ಷರಾಗಿ ಅಷ್ಟೇ ಅಲ್ಲದೆ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿನ ಸಾಲಿನಲ್ಲಿ ಕುಮಟಾ ತಾಲೂಕಿನ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು, ವಯೋಸಹಜ ಕಾಯಿಲೆಯಿಂದಾಗಿ ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ತಾಲೂಕಿನ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶೇಷಗಿರಿ ಶಾನಭಾಗ (ದಾಸ ಶಾನಭಾಗ) ಹಾಗೂ ಎಲ್ಲಾ ಸದಸ್ಯರೂ ಸಂತಾಪ ಸೂಚಿಸಿದ್ದಾರೆ.