ಕಾಂಗ್ರೆಸ್ ಪಕ್ಷದ ಜನಪ್ರಿಯ ಕಾರ್ಯಕ್ರಮವಾದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಕುಮಟಾದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದ ರಾಜ್ಯಾಧ್ಯಕ್ಷರಾದ ಮಾನ್ಯ ಆರ್. ಧ್ರುವನಾರಾಯಣ್ ಅವರು ಚಾಲನೆ ನೀಡಿದರು…
ಕಾರ್ಯಕ್ರಮಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆಸಿ ಈ ಕೋವಿಡ್ ಸಂಕಷ್ಟದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯಗಳ ಕುರಿತು ವಿರುದ್ಧ ಹರಿಹಾಯ್ದರು….
ಕಾರ್ಯಕ್ರಮದ ಆರಂಭದಲ್ಲಿ ಕೆಲ ದಿನಗಳ ಹಿಂದೆ ದೈವಾಧೀನರಾದ ಪಕ್ಷದ ಹಿರಿಯ ಮುಖಂಡರು, ನಗರ ಘಟಕದ ಮಾಜಿ ಅಧ್ಯಕ್ಷರಾದ ಸದಾನಂದ ಪ್ರಭು ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು..
ಆರೋಗ್ಯ ಹಸ್ತ ಕಾರ್ಯಕ್ರಮದ ಸಂಚಾಲಕರಾದ ಸದಾನಂದ ಡಂಗನವರು, ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿದರು..
ಕ್ಷೇತ್ರದ ಮಾಜಿ ಶಾಸಕಿಯರು ಹಾಗೂ ಇಂದಿನ ಕಾರ್ಯಕ್ರಮದ ಪ್ರಮುಖ ರುವಾರಿಗಳೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ, ಇದೊಂದು ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ದೇಶಕ್ಕೆ ಅಂಟಿರುವ ಕೊರೋನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಲು ಜನರನ್ನು ಪರೀಕ್ಷಿಸಿ ನಿರ್ಮೂಲನೆ ಮಾಡಲು ಈ ಕಾರ್ಯಕ್ರಮ ಸಹಾಯಕಾರಿಯಾಗಲಿದೆ. ಹೆಲ್ತ್ ವಾರಿಯರ್ಸ್ ಗಳು ಜನರ ಮನೆಮನೆಗೆ ತೆರಳಿ, ಸಾಮಾಜಿಕ ಅಂತರ ಕಾಯ್ದುಕೊಂಡು , ಅವರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ, ಅವರ ವಿಶ್ವಾಸ ಗಳಿಸಿ, ಕೊಟ್ಟಿರುವ ಸಲಕರಣೆಗಳನ್ನು ಉಪಯೋಗಿಸಿ ಎಚ್ಚರಿಕೆಯಿಂದ ಪರೀಕ್ಷಿಸುವಂತೆ ತಿಳಿಸಿದರು…
ವೈದ್ಯರಾರಾದ ಜಿತೇಂದ್ರ ಕುಮಾರ ಥೋಮ್ಸೆ ಹಾಗೂ ಸಹಾಯಕರು ಕಿಟ್ ನಲ್ಲಿರುವ ಉಪಕರಣಗಳ ಸೂಕ್ತ ಬಳಕೆಯ ಕುರಿತು ಹೆಲ್ತ್ ವಾರಿಯರ್ಸ್ ಗಳಿಗೆ ಜನರೊಂದಿಗೆ ಮಾತನಾಡುವ, ಕಿಟ್ ನಲ್ಲಿರುವ ಉಪಕರಣಗಳನ್ನು ಬಳಸುವ ಹಾಗೂ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ತರಬೇತಿ ನೀಡಿದರು…..
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಅವರು ಕಾರ್ಯಕ್ರಮ ಸಂಯೋಜಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಮೊಗೇರ್, ಕೆಪಿಸಿಸಿ ವೀಕ್ಷಕಿಯರಾದ ಶ್ಯಾಮಲಾ ಭಂಡಾರಿ, ಶ್ರೀನಿವಾಸ ಬಿ. ಎಸ್ .ಕೆ.ಭಾಗ್ವತ, ಸುಜಾತಾ ಗಾಂವ್ಕರ್,ರತ್ನಾಕರ ನಾಯ್ಕ, ಪುಷ್ಪಾ ನಾಯ್ಕ, ಅಬ್ದುಲ್ ಮಜೀದ್, ನವೀನ್ ಚಂದ್ರ ಶೆಟ್ಟಿ, ಮಿರೋನಿಕಾ , ಕೆ.ಶಂಭು ಶೆಟ್ಟಿ ಬಿಬಿ ಸಾರಾ, ಸುನಿತಾ ಡಿ. ಶೆಟ್ಟಿ,ಜಿ.ಡಿ.ಘೋರ್ಪಡೆ, ಆರ್.ಹೆಚ್.ನಾಯ್ಕ, ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ರವಿಕುಮಾರ್ ಎಂ.ಶೆಟ್ಟಿ, ಸುರೇಖಾ ವಾರೇಕರ್, ಮುಜಾಫರ್ ಸಾಬ್, ಯಶೋಧಾ ಶೆಟ್ಟಿ, ಪುರಸಭಾ ಎಂ.ಟಿ.ನಾಯ್ಕ,ವಿನಯಾ ಜಾರ್ಜ್, ಪ್ರಸನ್ನ ಶೆಟ್ಟಿ,ಸಚಿನ್ ನಾಯ್ಕ, ಸಂತೋಷ ನಾಯ್ಕ ಜಿಲ್ಲಾ ಕಾಂಗ್ರೆಸ್ ನ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಬ್ಲಾಕ್ ಅಧ್ಯಕ್ಷರುಗಳು-ಪದಾಧಿಕಾರಿಗಳು, ಕುಮಟಾ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಸೆಲ್ ಗಳ ಅಧ್ಯಕ್ಷರುಗಳು, ನಿಕಟಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷ/ಸದಸ್ಯರುಗಳು, ಮಾಜಿ ಪುರಸಭಾ/ತಾಲೂಕು ಪಂಚಾಯತ್/ಜಿಲ್ಲಾ ಪಂಚಾಯತ್/ಗ್ರಾಮ ಪಂಚಾಯತ್ ಅಧ್ಯಕ್ಷರು/ ಸದಸ್ಯರುಗಳು, ಪಕ್ಷದ ಹಿರಿಯ ಕಿರಿಯ ಮುಖಂಡರುಗಳು ಹಾಗೂ ಕೊರೋನಾ ವಾರಿಯರ್ಸ್ ಗಳು ಹಾಜರಿದ್ದರು……