ಕುಮಟಾ: ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಕಬಂದ ಬಾಹು ಚಾಚುತ್ತಿದ್ದು ಕುಮಟಾದಲ್ಲಿ ತನ್ನ ಆರ್ಭಟ ನಡೆಸಿದೆ.
ಕೊರೋನಾ ಕಾಣಿಸಿಕೊಂಡಿದ್ದ ಮೂಲತಃ ಪಟ್ಟಣದ ಬಸ್ ಡಿಪೋ ಸಮೀಪದ ರಾಮನಗರ ನಿವಾಸಿಯಾದ 73 ವರ್ಷದ ಶಾಂತಾ ಇಂದು ಕೊನೆಯುಸಿರೆಳೆದಿದ್ದು ಅವರು ಅನ್ಯ ಖಾಯಿಲೆಯಿಂದಲೂ ಬಳಲುತ್ತಿದ್ದರು ಎಂಬ ಬಗ್ಗೆ ಸ್ಥಳೀಯ ಮಾಹಿತಿ ಲಭಿಸಿದೆ.
ಇವರು ಬೆಂಗಳೂರಿನಲ್ಲಿ ಪುತ್ರನ ಜೊತೆಗೆ ವಾಸವಾಗಿದ್ದರು. ಇತ್ತಿಚೆಗೆ ಕುಮಟಾಕ್ಕೆ ಆಗಮಿಸಿದ್ದ ಅವರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಾಗ ಪೊಸಿಟಿವ್ ಬಂದಿತ್ತು ಇವರು ಇಲ್ಲಿನ ಖಾಸಗಿ ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಇಂದು ಕೊನೆ ಯುಸಿರೆಳೆದರು ಎನ್ನಲಾಗಿದೆ.
ಇವರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರ ಸಹೋದರಿಯಾಗಿದ್ದಾರೆ. ಇವರ ಸಾವಿನಿಂದಾಗಿ ತಾಲೂಕಿನಲ್ಲಿ ಕೊರೊನಾಗೆ ಮೂರನೇ ಬಲಿಯಾಗಿದೆ.