ಭಟ್ಕಳ ತಾಲೂಕಿನ ಜಾಲಿ ಬೀಚ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸೈಯದ್ ಅಕ್ರಮ, ಸೈಯದ್ ಮೂಸಾ,ರೂಪೇಶ ಮೊಗೇರ, ಹೇಮಂತ ನಾಯ್ಕ ಎಂಬುವವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಆರೋಪಿಗಳು ಭಟ್ಕಳದ ಜಾಲಿ ಬೀಚ್ ರಸ್ತೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 250 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 250 ಗ್ರಾಂ ಗಾಂಜಾ, ಒಂದು ಬೈಕ್, ಒಂದು ಕಾರ್, ಎರಡು ಮೊಬೈಲ್ ಸೇರಿದಂತೆ 5700 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಭಾರತದಲ್ಲಿ ಅಭಿನಂದನ್ ರಂತಹ ಸಾವಿರಾರು ವೀರರಿದ್ದಾರೆ ಅವರೆಲ್ಲರೂ ನಮಗೆ ಆದರ್ಶಪ್ರಾಯರು- ಉಮೇಶ ಮುಂಡಳ್ಳಿ