ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ 200 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 136 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ


ಇಂದು ಕಾರವಾರದಲ್ಲಿ 38, ಅಂಕೋಲಾದಲ್ಲಿ 14, ಕುಮಟಾದಲ್ಲಿ 29, ಹೊನ್ನಾವರದಲ್ಲಿ 27, ಭಟ್ಕಳದಲ್ಲಿ 7, ಶಿರಸಿ 33, ಸಿದ್ದಾಪುರ 6, ಯಲ್ಲಾಪುರದಲ್ಲಿ 27, ಮುಂಡಗೋಡಿನಲ್ಲಿ 8, ಹಳಿಯಾಳದ 11 ಮಂದಿಯಲ್ಲಿ ಸೋಂಕು ದೃಢವಾಗಿದೆ

RELATED ARTICLES  ಮಂಜುಸುತ ವಿರಚಿತ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ


ಇಂದು ಮುಂಡಗೋಡಿನಲ್ಲಿ 1, ಹೊನ್ನಾವರ 2, ಭಟ್ಕಳ 1, ಯಲ್ಲಾಪುರದಲ್ಲಿ ಓರ್ವ ಕೊರೋನಾ ಸೋಂಕಿಗೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯ 7560 ಮಂದಿಯಲ್ಲಿ ಸೋಂಕು ದೃಢವಾಗಿದ್ದು, 5305 ಮಂದಿ ಗುಣಮುಖರಾಗಿದ್ದಾರೆ. 935 ಮಂದಿ ಆಸ್ಪತ್ರೆಗಳಲ್ಲಿ, 1230 ಮಂದಿ ಹೋಂ ಐಸೋಲೇಶನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES  ಮೋದಿ ಬಗ್ಗೆ ಲೇವಡಿ ಮಾಡಿದ ಮುಖ್ಯಮಂತ್ರಿ: ಅಸ್ನೋಟಿಕರ್ ಪರ ಬ್ಯಾಟಿಂಗ್.


ಇಂದು ಒಟ್ಟೂ 136 ಮಂದಿ ಗುಣಮುಖರಾಗಿದ್ದು, ಕಾರವಾರದಲ್ಲಿ 4, ಅಂಕೋಲಾದಲ್ಲಿ 7, ಕುಮಟಾ 12, ಹೊನ್ನಾವರದಲ್ಲಿ 13, ಭಟ್ಕಳ 10, ಶಿರಸಿ 5, ಸಿದ್ದಾಪುರ 12, ಯಲ್ಲಾಪುರದಲ್ಲಿ 42, ಮುಂಡಗೋಡ 8, ಹಳಿಯಾಳದಲ್ಲಿ 3, ಜೋಯ್ಡಾದ 20 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.