ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 214 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 10, ಅಂಕೋಲಾ 17, ಕುಮಟಾ 37, ಹೊನ್ನಾವರ 32, ಭಟ್ಕಳ 6, ಶಿರಸಿ 62, ಸಿದ್ದಾಪುರ 5, ಯಲ್ಲಾಪುರ 7, ಮುಂಡಗೋಡ 1 ಮತ್ತು ಹಳಿಯಾಳದಲ್ಲಿ 27 ಕೇಸ್ ದೃಢಪಟ್ಟಿದೆ.

RELATED ARTICLES  ಪುಟ್ಟ ಮಗುವಿನ ಮೇಲೆ ದಾಳಿಮಾಡಿದ ಬೀದಿ ನಾಯಿ.

ಜಿಲ್ಲೆಯಲ್ಲಿ ಇಂದು ನಾಲ್ವರ ಸಾವಾಗಿದ್ದು, ಸಾವಿನ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಹೊನ್ನಾವರದಲ್ಲಿ 2, ಶಿರಸಿ 1 ಮತ್ತು ಹಳಿಯಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇಂದು 214 ಕೇಸ್ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,774ಕ್ಕೆ ಏರಿಕೆಯಾಗಿದೆ.

RELATED ARTICLES  ಸಂಗೀತ ಮನುಷ್ಯನ ಶ್ರೇಷ್ಟತೆಯನ್ನು ಬೆಳಗುತ್ತಿದ್ದರೆ, ಸಾಹಿತ್ಯಾಧ್ಯಯನ ಮರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆ : ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ

ಇಂದು ವಿವಿಧ ಆಸ್ಪತ್ರೆಯಿಂದ 52 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕುಮಟಾ 5, ಹೊನ್ನಾವರ 6, ಶಿರಸಿ 2, ಸಿದ್ದಾಪುರ 7, ಮುಂಡಗೋಡ 6, ಹಳಿಯಾಳದಲ್ಲಿ 26 ಮಂದಿ ಬಿಡುಗಡೆಯಾಗಿದ್ದಾರೆ.