ಭಟ್ಕಳ: ಮಾದಕ ವಸ್ತು ಗಾಂಜಾವನ್ನು ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಮಾರಾಟ ಮಾಡುತ್ತಿದ್ದ ಭಟ್ಕಳದ ಮೂರು ವ್ಯಕ್ತಿಗಳ ಬಂಧಿಸಿ, ಸುಮಾರು 750 ಗ್ರಾಂ ತೂಕದ ಗಾಂಜಾ ಹಾಗೂ ಸ್ಕೂಟಿ-1, ಮೋಬೈಲ್-3, ನಗದು ಹಣ 2700/- ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಭಟ್ಕಳದ ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಹೊನ್ನಾವರ ಮಂಕಿಯ, ಗಣಪತಿ ಮಂಜಪ್ಪ ನಾಯ್ಕ , ಮುರ್ಡೇಶ್ವರದ ಜನಾರ್ಧನ ಅಣ್ಣಪ್ಪ ಹರಿಕಂತ್ರ ಹಾಗು ಭಟ್ಕಳ ಕರಿಕಲ್ ಆನಂದ ಮಾದೇವ ಮೂಗೇರ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯನ್ನು ಶ್ರೀ ಶಿವಪ್ರಕಾಶ ದೇವರಾಜ ಹಾಗೂ ಶ್ರೀ ಎಸ್ ಬದ್ರೀನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ ಶ್ರೀ ನಿಖಿಲ್ ಬಿ. ಸಹಾಯಕ ಪೊಲೀಸ್ ಅಧೀಕ್ಷಕರು ಭಟ್ಕಳ ಉಪವಿಭಾಗ ರವರ ನೇತೃತ್ವದಲ್ಲಿ ಶ್ರೀ ದಿವಾಕರ್ ಪಿ.ಎಮ್ ಸಿ.ಪಿ.ಐ ಭಟ್ಕಳ ಮುಂದಾಳತ್ವದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪಿಎಸ್ಐ ಶ್ರೀ ಓಂಕಾರಪ್ಪ, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಭರತಕುಮಾರ ವಿ. ಶ್ರೀ ಹೆಚ್ ಬಿ ಕುಡಗುಂಟಿ. ಎಎಸ್ಐ ರಾಮಚಂದ್ರ ನಾಯಕ, ಸಿಬ್ಬಂದಿಗಳಾದ ಶ್ರೀ ದಿನೇಶ ನಾಯಕ, ಲೊಕೇಶ ಕತ್ತಿ, ಈರಣ್ಣ ಪೂಜೇರಿ, ರಾಜು ಗೌಡಾ, ದೀಪಕ ಎಸ್ ನಾಯ್ಕ, ನಾಗರಾಜ ಮೂಗೇರ, ವಿನಾಯಕ ಪಾಟೀಲ್, ಗಣೇಶ ಗಾಂವಕರ, ಮಕ್ತುಮ್ ಪತ್ತೇಖಾನ್, ಗೌತಮ್ ರೊಡ್ಡನವರ, ಮಲ್ಲಿಕಾರ್ಜುನ ಉಟಗಿ, ಸಚೀನ್ ಪವಾರ, ಮಲ್ಲಿಕಾರ್ಜುನ ನಾಯ್ಕ, ಅಶೋಕ ನಾಯ್ಕ, ದೇವು ಆರ್ ನಾಯ್ಕ, ರಾಮಚಂದ್ರ ಕಜ್ಜಿದೊಣ್ಣಿ, ವಿಶೇಷ ತಂಡದ ಸಿಬ್ಬಂದಿಯವರಾದ ಸಂತೋಷ ಹೊನ್ನಾಳ, ಮೋಹನ ಪೂಜಾರಿ, ಚಾಲಕರಾದ ದೇವರಾಜ ಮೂಗೇರ, ಕುಬೇರ ಹೊಸುರ ಇವರು ಹಾಜರಿರುತ್ತಾರೆ. ಈ ಬಗ್ಗೆ ಮಾನ್ಯ ಎಸ್.ಪಿ ಸಾ: ಕಾರವಾರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.