ಶಿರಸಿ: ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ 2020-21 ನೇ ಶೈಕ್ಷಣಿಕ ಸಾಲಿಗಾಗಿ ವೃತ್ತಿಪರ ಇಂಜಿನಿಯರಿಂಗ್/ಮೆಡಿಕಲ್ ಪದವಿ ಸೇರಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಿದೆ.
ವಿದ್ಯಾರ್ಥಿಗಳು ಮೊದಲನೆ ಬಾರಿ ಪಿ.ಯು.ಸಿ, ದ್ವಿತೀಯ ವರ್ಷ ಪರೀಕ್ಷೆಯನ್ನು ಮಾರ್ಚ್ 2020 ರಲ್ಲಿ ಬರೆದು ಶೇ.80ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.


ದ್ವಿತೀಯ ಪಿ.ಯು.ಸಿ ನಂತರ ಇಂಜಿನಿಯರಿಂಗ್, ಮೆಡಿಕಲ್ ವಿಭಾಗಗಳಿಗೆ ಪ್ರವೇಶ ಬಯಸುವವರು ಅರ್ಜಿ ಹಾಕಲು ಅರ್ಹರು. ಕರ್ನಾಟಕಕ್ಕೆ ಸಂಬಂಧಪಟ್ಟು ಇಂಜಿನಿಯರಿಂಗ್ ಸೇರಬಯಸುವವರು ಅರ್ಜಿ ಹಾಕಲು ಅರ್ಹರು. ಕರ್ನಾಟಕಕ್ಕೆ ಸಂಬಂಧಪಟ್ಟು ಇಂಜಿನೀಯರಿಂಗ್ ಸೇರಬಯಸುವ ವಿದ್ಯಾರ್ಥಿಗಳು ಸಿ.ಇ.ಟಿ. ಪರೀಕ್ಷೆಯಲ್ಲಿ 15000 ಕ್ಕಿಂತ ಕಡಿಮೆ ರ್ಯಾಂಕ್‍ನೊಂದಿಗೆ ಹಾಗೂ ಮೆಡಿಕಲ್ ಸೇರಬಯಸುವ ವಿದ್ಯಾರ್ಥಿಗಳು 3000 ಕ್ಕಿಂತ ಕಡಿಮೆ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿರಬೇಕು.

RELATED ARTICLES  ವಾಯುಪಡೆ ನೇಮಕಾತಿ ರ್ಯಾಲಿಯಲ್ಲಿ ನೀವು ಭಾಗವಹಿಸಬೇಕೆ? ಹಾಗಾದರೆ ಇದೆ ಅವಕಾಶ.


ಕುಟುಂಬದ ಮಾಸಿಕ ವರಮಾನ 15,000/- ರೂ ಗಿಂತ ಕಡಿಮೆ ಇರಬೇಕು.

ಅರ್ಜಿ ಸಲ್ಲಿಕೆ ವಿಧಾನ: ವಿದ್ಯಾ ಷೋಷಕ ಅರ್ಜಿಯು www.vidhyaposhak.ngo ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಅಗತ್ಯ ಮಾಹಿತಿಯನ್ನು ತುಂಬಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
ಪೂರ್ಣ ಮಾಹಿತಿ, ಮಾರ್ಗಸೂಚಿಗಳು, ನಿಯಮಗಳು, ನಿಬಂಧನೆಗಳಿಗೆ ವಿದ್ಯಾಪೋಷಕ ಅಂತರ್ಜಾಲ www.vidhyaposhak.ngo ಸಂಪರ್ಕಿಸಬಹುದು. ಅಲ್ಲದೇ ಹತ್ತಿರದ ಕಛೇರಿಗೆ ಭೇಟಿ ಮಾಡಬಹುದು ಅಥವಾ ವಿದ್ಯಾಪೋಷಕದ ದೂ. 08362747357 ಮೊ: 8861201828 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

RELATED ARTICLES  ನಾಳೆ ಲಭ್ಯವಿರುವ ಕೋವಿಡ್ ಲಸಿಕೆಗಳ ವಿವರ