ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 175 ಕೊರೋನಾ ಪ್ರಕರಣ ದಾಖಲಾಗಿದೆ.

ಕಾರವಾರದಲ್ಲಿ 28, ಅಂಕೋಲಾದಲ್ಲಿ 5, ಕುಮಟಾದಲ್ಲಿ 32, ಹೊನ್ನಾವರ, ಭಟ್ಕಳದಲ್ಲಿ ತಲಾ 18, ಶಿರಸಿಯಲ್ಲಿ 24, ಸಿದ್ದಾಪುರದಲ್ಲಿ 8, ಯಲ್ಲಾಪುರದಲ್ಲಿ 15, ಮುಂಡಗೋಡದಲ್ಲಿ 5, ಹಳಿಯಾಳದಲ್ಲಿ 12 ಹಾಗೂ ಜೊಯಿಡಾದಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ.

RELATED ARTICLES  ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ನಾಯ್ಕರಿಂದ ರವೀಂದ್ರ ಭಟ್ಟ ಸೂರಿಯವರಿಗೆ ಆತ್ಮೀಯ ಸನ್ಮಾನ

409 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಆರು ಮಂದಿ ಸಾವನ್ನಪ್ಪಿ, ಮೃತಪಟ್ಟವರ ಸಂಖ್ಯೆ 101ಕ್ಕೆ ಏರಿದೆ.ಕಾರವಾರ, ಭಟ್ಕಳದಲ್ಲಿ ತಲಾ ಇಬ್ಬರು, ಹೊನ್ನಾವರ, ಸಿದ್ದಾಪುರದಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದಾರೆ.

ಕಾರವಾರದಲ್ಲಿ 75, ಅಂಕೋಲಾದಲ್ಲಿ 4, ಕುಮಟಾದಲ್ಲಿ 52, ಹೊನ್ನಾವರದಲ್ಲಿ 5, ಭಟ್ಕಳದಲ್ಲಿ 20, ಶಿರಸಿಯಲ್ಲಿ 1, ಯಲ್ಲಾಪುರದಲ್ಲಿ 120, ಮುಂಡಗೋಡದಲ್ಲಿ 74 ಹಾಗೂ ಹಳಿಯಾಳದಲ್ಲಿ 58 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.ಈವರೆಗೆ ಜಿಲ್ಲೆಯ 8,110 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 5,872 ಮಂದಿ ಗುಣಮುಖರಾಗಿದ್ದಾರೆ. 2,137 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES  ಶಾರ್ಟ್ ಸರ್ಕ್ಯೂಟ್‌ನಿಂದ ಕುಮಟಾದ ಮನೆಯೊಂದರಲ್ಲಿ ಬೆಂಕಿ ಅವಘಡ.