ಕುಮಟಾ : ತಾಲೂಕಿನಲ್ಲಿ ಇಂದು ಕರೊನಾ ಅಬ್ಬರಿಸಿದ್ದು, ಬರೋಬ್ಬರಿ 42 ಸೋಂಕಿತ ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು ಕುಮಟಾದಲ್ಲಿ ಕರುನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಹೆರವಟ್ಟಾದಲ್ಲಿ 6, ಹೊಸಹೆರವಟ್ಟಾ 3, ಮಾದನಗೇರಿ 3, ಚಿತ್ರಗಿ 2, ಬೆಟ್ಗೇರಿ 2, ಹಳಕಾರ ಮದ್ಗುಣಿ 2, ದೇವರಹಕ್ಕಲ 5, ಹೆಗಡೆ ಚಿಟ್ಟೆಕಂಬಿ 4, ಹೆಗಡೆ 3, ಭಸ್ತಿಪೇಟೆ 2 ಸೇರಿದಂತೆ ಉಪ್ಪಿನ ಪಟ್ಟಣ, ಗುಜರಗಲ್ಲಿ, ಕಾಗಲ್‌ಮಾನೀರ್, ವಾಲಗಳ್ಳಿ, ಮಣ್ಕಿ, ಹಿರೇಗುತ್ತಿ, ಅಂತ್ರವಳ್ಳಿ ಸೇರಿದಂತೆ ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಕೆಲವು ಪ್ರಕರಣಗಳು ಈ ದಿನ ಸಂಜೆ ದೃಢೀಕರಣಗೊಂಡಿತ್ತು, ಜಿಲ್ಲಾ ವರದಿಯಲ್ಲಿ ನಾಳೆ ಸೇರ್ಪಡೆಯಾಗಲಿದೆ.

ಚಿತ್ರಗಿಯ 42 ವರ್ಷದ ಪುರುಷ, 30 ವರ್ಷದ ಮಹಿಳೆ, ಹಣ್ಣೆಮಠದ 72 ವರ್ಷದ ವೃದ್ಧೆ, ಭಸ್ತಿಪೇಟೆಯ 65 ವರ್ಷದ ಪುರುಷ, 32 ವರ್ಷದ ಪುರುಷ, ಹಿರೇಗುತ್ತಿಯ 33 ವರ್ಷದ ಪುರುಷ, ಅಂತ್ರವಳ್ಳಿಯ 41 ವರ್ಷದ ಪುರುಷ, ತೋರ್ಕೆ ದೇವರಬಾವಿಯ 60 ವರ್ಷದ ಪುರುಷ, ಹಳಕಾರ ಮದ್ಗುಣಿಯ 45 ವರ್ಷದ ಪುರುಷ, 39 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

RELATED ARTICLES  ಸೂರಜ ನಾಯ್ಕ ಸೋನಿ ಅವರ ಹುಟ್ಟು ಹಬ್ಬ ನಿಮಿತ್ತ ಕುಮಟಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಹೆರವಟ್ಟಾದ 45 ವರ್ಷದ ಪುರುಷ, 45 ವರ್ಷದ ಇಬ್ಬರು ಮಹಿಳೆ, 53 ವರ್ಷದ ಪುರುಷ, 29 ವರ್ಷದ ಯುವಕ, 32 ವರ್ಷದ ಪುರುಷ, ಗಾಂಧಿನಗರದ 67 ವರ್ಷದ ವೃದ್ಧ, ಮಾದನಗೇರಿಯ 72 ವರ್ಷದ ವೃದ್ಧ, 37 ವರ್ಷದ ಪುರುಷ, 40 ವರ್ಷದ ಪುರುಷ, ಹೊಸಹೆರವಟ್ಟಾದ 70 ವರ್ಷದ ವೃದ್ಧೆ, 80 ವರ್ಷದ ವೃದ್ಧೆ, 58 ವರ್ಷದ ಪುರುಷ, ಮಣ್ಕಿಯ 50 ವರ್ಷದ ಪುರುಷ, ವಾಲಗಳ್ಳಿಯ 30 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

RELATED ARTICLES  ಸಚಿವ ಆರ್.ವಿ.ದೇಶಪಾಂಡೆ ಪರಮಾಪ್ತ ಸುಭಾಷ ಕೊರ್ವೆಕರ ಮನೆಗಳ ಮೇಲೆ ಐಟಿ ರೈಡ್!

ಬೆಟ್ಗೇರಿಯ 78 ವರ್ಷದ ವೃದ್ಧೆ, 81 ವರ್ಷದ ವೃದ್ಧ, ದೇವರಹಕ್ಕಲದ 51 ವರ್ಷದ ಪುರುಷ, 41 ವರ್ಷದ ಮಹಿಳೆ, 62 ವರ್ಷದ ಮಹಿಳೆ, 49 ವರ್ಷದ ಮಹಿಳೆ, 55 ವರ್ಷದ ಮಹಿಳೆ, ಉಪ್ಪಿನಪಟ್ಟಣದ 60 ವರ್ಷದ ಮಹಿಳೆ, ಗುಜರಗಲ್ಲಿಯ 34 ವರ್ಷದ ಮಹಿಳೆ, ಹೆಗಡೆ ಚಿಟ್ಟೆಕಂಬಿಯ 30 ವರ್ಷದ ಮಹಿಳೆ, 7 ವರ್ಷದ ಬಾಲಕಿ, 4 ವರ್ಷದ ಮಗು, 1 ವರ್ಷದ ಮಗು, ಹೆಗಡೆಯ 67 ವರ್ಷದ ವೃದ್ಧ, 70 ವರ್ಷದ ವೃದ್ಧ, 42 ವರ್ಷದ ಪುರುಷ, ಕಾಗಲ್‌ಮಾನೀರ್‌ನ 35 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.