ಕುಮಟಾ : ತಾಲೂಕಿನ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಹಾಗೂ ಜಿಲ್ಲಾ,ರಾಜ್ಯ ಪ್ರಶಸ್ತಿ ಪುರಸ್ಕರತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಿವೃತ್ತರಾದ ಮಹಾಲಕ್ಷ್ಮಿ ಹೆಗಡೆ ,ರೇಣುಕಾ ಗುನ ಗಾ, ಶ್ರೀ ಏನ್ ಅರ್ ಗಜು,ಶ್ರೀ ಬಿ ಎಸ್ ಗೌಡರ್,ಡಾ ಎಸ್ ಜಿ ರಾಯ್ಕರ್,ಡಾ ಉಮೇಶ ಶಾಸ್ತ್ರಿ,ಶ್ರೀ ಎಂ ಜಿ ನಾಯ್ಕ್,ಶ್ರೀ ಆರ್ ಜಿ ನಾಯ್ಕ್. ಜಿಲ್ಲಾ ಪ್ರಶಸ್ತಿ ಪುರಸ್ಕರತರಾದ ಶ್ರೀ ಎಂ ಟಿ ಗೌಡ,ಶ್ರೀಮತಿ ತಾರಾ ಎಂ ಗೌಡ,ಕಲ್ಪನಾ ನಾಯಕ,
ರಾಜ್ಯ ಪ್ರಶಸ್ತಿಯನ್ನು ಪಡೆದ ಶ್ರೀ ರಾಜು ಟಿ ನಾಯ್ಕ್,ಶ್ರೀ ರವೀಂದ್ರ ಭಟ್ ಸೂರಿ,ಹಾಗೂ ಎನ್ ಸಿ ಸಿ ಅಧಿಕಾರಿಯಾಗಿ ಮುಖ್ಯಮಂತ್ರಿಗಳ ಪದಕ ಪಡೆದ ಡಾ. ಸೋಮಶೇಖರ್ ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕರಾದ ಡಾ. ಎಸ್.ಜಿ.ರಾಯ್ಕರ, ಡಾ. ಉಮೇಶ ಶಾಸ್ತ್ರೀ ನಿ ವೃತ್ತ ಪ್ರಾಚಾರ್ಯರುಗಳು ಹಾಗೂ ಪ್ರೊ.ಎಂ.ಜಿ.ನಾಯ್ಕ,ಪ್ರೊ.ಆರ್.ಜಿ.ನಾಯ್ಕರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ. ಶಂಕರ ಭಟ್ಟ ಮಾತನಾಡಿ ಇಂದಿನ ಶಿಕ್ಷಣ ವ್ಯವಸ್ಥೆಯ ಲೋಪದಿಂದಾಗಿ ಸುಶಿಕ್ಷಿತ, ಸಮಾಜಘಾತಕ ಶಕ್ತಿಗಳು ಹೆಚ್ಚಾಗಿ ಕ್ರಿಯಾಶೀಲ ರಾಗುತ್ತಿರುವುದು ಶೋಚನೀಯ.ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದಿಂದಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತಿತ್ತು.ಶಿಕ್ಷಕರಿಗೂ ಗೌರವ ಸಿಗುತ್ತಿತ್ತು.ಹಲವು ಉದಾ ಹರಣೆಗಳ ಮುಲಕ ಶಿಕ್ಷಕ,ಶಿಕ್ಷಣದ ಮಹತ್ವವನ್ನು ಮಾರ್ಮಿಕವಾಗಿ ತಿಳಿಸಿದರು.
ಶಿಕ್ಷಣದಲ್ಲಿ ಆಧ್ಯಾತ್ಮಿಕತೆ ಆಧುನಿಕತೆ ಸಮನ್ವಯತೆ ಸಾಧಿಸಿದಾಗ ದೇಶಭಕ್ತ ಪ್ರಜೆಗಳು ಸಿದ್ದಗೊಳ್ಳುತ್ತಾರೆ ಎಂದರು.ಇನ್ನೋರ್ವ ಅತಿಥಿ. ಶ್ರೀ.ರಾಜೇಂದ್ರ ಭಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ಇಲಾಖೆಯಿಂದ ಆಗಬೇಕಾದ ಕೆಲಸವನ್ನು ಲೈನ್ಸ್ ಸೇವಾ ಸಂಸ್ಥೆ ಮಾಡಿದ್ದಕ್ಕಾಗಿ ಅಭಿನಂದಿಸಿದರು.ಶಿಕ್ಷಕರು ಗುರುತ್ವ ಪಡೆಯುವತ್ತ ಶ್ರಮಿಸಲು ಕರೆ ನೀಡಿದರು.
ಲಾಯನ್ಸ್ ಅಧ್ಯಕ್ಷೆ ಲೈನ್. ವಿನಯಾ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪುರಸ್ಕರತರನ್ನು ಅಭಿನಂದಿಸಿ,ಶಿಕ್ಷಕರ ವೃತ್ತಿ ಶ್ರೇಷ್ಟ ಹಾಗೂ ಜವಾಬ್ದಾರಿಯುತವಾದದ್ದು ಎಂದರು.ಲೈನ್ ಡಾ. ರೇವತಿ ರಾವ್ ಸ್ವಾಗತಿಸಿದರು.ಲೈನ್. ವಿ.ಐ.ಹೆಗಡೆ ಅತಿಥಿಗಳ ಪರಿಚಯಿಸಿದರು.ಕಾರ್ಯದರ್ಶಿ ಲೈನ್. ಎಸ್.ಎಸ್.ಹೆಗಡೆ ವಂದಿಸಿದರು.