ಶಿರಸಿ: ಪ್ರತ್ಯೇಕ ಶಿರಸಿ ಜಿಲ್ಲಾ ರಚನೆಗೆ ಆಗ್ರಹಿಸಿ ಇಂದು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು ಶಿರಸಿ ಶಾಸಕರು ಹಾಗೂ ವಿಧಾನಸಭಾಧ್ಯಕ್ಷರೂ ಆದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಿದರು.
ಮುಂದಿನ ದಿನಗಳಲ್ಲಿ ಪ್ರತ್ಯೇಕ ಜಿಲ್ಲಾ ರಚನೆಗಾಗಿ ನಡೆಯುವ ಹೋರಾಟ ವಿಭಿನ್ನ ಆಯಾಮ ಪಡೆಯಲಿದೆ ಎಂದು ತಿಳಿಸಿದ ಹೋರಾಟಗಾರರು .ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಗಾಂಧಿ ಪ್ರತಿಮೆ ಮುಂದೆ ಅಳುತ್ತ ತಮಟೆ ಬಾರಿಸುವ ಚಳುವಳಿ ಮತ್ತು ಅಕ್ಟೋಬರ್ 14 ರಂದು ಜನ ಜಾಗೃತಿಗಾಗಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸುವುದಾಗಿ ತಿಳಿಸಿದರು.
ಪ್ರತ್ಯೇಕ ಶಿರಸಿ ಜಿಲ್ಲಾ ರಚನೆಗೆ ತಿರ್ಮಾನ ಕೈಗೊಳ್ಳದಿದ್ದಲ್ಲಿ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸದೆ ಕಪ್ಪು ಬಾವುಟ ಹಿಡಿದು ಕರಾಳ ದಿನ ಆಚರಣೆ ಮಾಡುವ ಎಚ್ಚರಿಕೆ ನೀಡಿದರು.