ಲಾಯನ್ಸ್ ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು 210 ದೇಶಗಳಲ್ಲಿ 14 ಲಕ್ಷ ಸದಸ್ಯರಗಳನ್ನು ಸೇರಿ 103 ವರ್ಷಗಳಿಂದ ಸತತವಾಗಿ ಸೇವಾ ಚಟುವಟಿಕೆಗಳಲ್ಲಿ ನಿರತವಾಗಿದೆ. ಲಾಯನ್ಸ್ ಜಿಲ್ಲೆ 317 ಬಿ ಇದು ಗೋವಾ ಮತ್ತು ಕರ್ನಾಟಕದ 10 ರೇವಿನ್ಯೂ ಜಿಲ್ಲೆಗಳನ್ನು ಒಳಗೊಂಡಿದ್ದು, 103 ಕ್ಲಬ್‍ಗಳಿಂದ 3,500 ನಿಸ್ವಾರ್ಥ ಲಾಯನ್ಸ್ ಸದಸ್ಯರನ್ನು ಹೊಂದಿದೆ ಎಂದು ಜಿಲ್ಲಾ ಗರ್ವನರ್ ಲಾಯನ್ ಗಿರೀಶ ಕುಚಿನಾಡ ತಿಳಿಸಿದರು.

ಮುಂದುವರೆದು ನಮ್ಮ ಲಾಯನ್ಸ್ ಜಿಲ್ಲೆಗೆ ಅಂತರಾಷ್ಟ್ರೀಯ ಸಂಸ್ಥೆಯಿಂದ ಬಹಳಷ್ಟು ಅನುದಾನ ಈ ಹಿಂದಿನ ದಿನಗಳಲ್ಲಿ ಬಂದಿರುತ್ತದೆ. ಅದರಿಂದಾಗಿಯೇ ನಮ್ಮ ಲಾಯನ್ಸ್ ಜಿಲ್ಲೆಯಲ್ಲಿ 4 ಕಣ್ಣಿನ ಆಸ್ಪತ್ರೆಗಳು, 15 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಬ್ಲಡ್ ಬ್ಯಾಂಕ್‍ಗಳನ್ನು ಹೊಂದಿವೆ. ಕಳೆದ ವರ್ಷ ನಮ್ಮ ಲಾಯನ್ಸ್ ಜಿಲ್ಲೆಗೆ ನೆರೆ ಪರಿಹಾರಕ್ಕಾಗಿ ಮತ್ತು ಕೋವಿಡ್ ಪೀಡಿತರ ನೆರವಿಗಾಗಿ 20 ಸಾವಿರ ಡಾಲರ್ ಅನುದಾನ ಅಂತರಾಷ್ಟ್ರೀಯ ಸಂಸ್ಥೆಯಿಂದ ಬಂದಿತ್ತು. ಈ ವರ್ಷವೂ ಕೂಡ ತುರ್ತು ನೆರೆ ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ, ಅಂಕೋಲಾ ಈ ಭಾಗಗಳಲ್ಲಿ ಅಲ್ಲದೇ ನರಗುಂದ, ಬಾಗಲಕೋಟ, ಜಮಖಂಡಿ ಮುಂತಾದ ಕಡೆಗಳಲ್ಲಿ ನೆರೆಯಿಂದ ಸಮಸ್ಯೆ ಉಂಟಾಗಿ ಜನರು ತೊಂದರೆ ಅನುಭವಿಸಿದ್ದು ಅದನ್ನು ನಮ್ಮ ಲಾಯನ್ಸ್ ಜಿಲ್ಲೆ ಅಂತರಾಷ್ಟ್ರೀಯ ಸಂಸ್ಥೆಯೆ ಗಮನಕ್ಕೆ ತಂದು ತುರ್ತು ಪರಿಹಾರ ನೀಡುವಂತೆ ಕೋರಿದ್ದು ಅದಕ್ಕೆ ಸ್ಪಂದಿಸಿದ ಸಂಸ್ಥೆ 10 ಸಾವಿರ ಡಾಲರ್‍ಗಳನ್ನು ಪರಿಹಾರಕ್ಕಾಗಿ ಬಿಡುಗಡೆ ಮಾಡಿದೆ. ಈ ಹಣದಿಂದ ಸರಿಸುಮಾರು 600 ಬ್ಯಾಗ್‍ಗಳನ್ನು ತಯಾರಿಸಿ ಪ್ರತಿಯೊಂದು ಬ್ಯಾಗ್‍ಗಳಲ್ಲಿ ಆಹಾರ ದಿನಸಿಗಳು, ಔಷಧಗಳು, ಮಾಸ್ಕ್‍ಗಳು, ಸೆನಿಟೈಸರ್, ಸೀರೆ, ಬ್ಲಾಂಕೆಟ್, ಲುಂಗಿ, ಟವೆಲ್ ಮುಂತಾದ ಸಾಮಗ್ರಿಗಳನ್ನು ಇಟ್ಟು ನೊಂದ ಜನರಿಗೆ ವಿವಿಧ ಕಡೆಗಳಲ್ಲಿ ವಿತರಿಸಲಾಗುವುದು. ಈಗಾಗಲೇ ಆಯಾ ಪ್ರದೇಶಗಳಲ್ಲಿ ನೊಂದ ಜನರನ್ನು ಗುರುತಿಸುವ ಕಾರ್ಯ ಅಲ್ಲಿಯ ರೇವಿನ್ಯೂ ಅಧಿಕಾರಿಗಳ ಸಹಾಯದಿಂದ ನಮ್ಮ ಲಾಯನ್ಸ್ ಕ್ಲಬ್‍ಗಳ ಸದಸ್ಯರು ಗುರುತಿಸಿದ್ದಾರೆ, ಈ ಎಲ್ಲಾ ಗುರುತಿಸಿದ ಫಲಾನುಭವಿಗಳಿಗೆ ಇನ್ನೂ ಕೆಲವೇ ದಿನಗಳಲ್ಲೆ ಈ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಒಳಗೊಂಡ ತುರ್ತು ಪರಿಹಾರದ ಬ್ಯಾಗ್‍ನ್ನು ನೈಜ ನೆರೆ ಪೀಡಿತ ಜನರಿಗೆ ವಿತರಿಸಲಾಗುವುದು.

RELATED ARTICLES  ಯಶಸ್ವಿಯಾದ ಗೋ ಸಂತರ್ಪಣೆ ಹಾಗೂ ಗೋ ಸಂಧ್ಯಾ - ನಮ್ಮ ನೇತಾರರಿಗೆ ತಾಕತ್ತಿದ್ದರೆ ಗೋವಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿ : ಮೋಹನ ಹೆಗಡೆ ಅಭಿಮತ.


ಈ ಮೇಲಿನ ವಿಷಯವನ್ನು ಲಾಯನ್ಸ್ ಜಿಲ್ಲಾ ಗರ್ವನರ್ ಆದ ಡಾ. ಗಿರೀಶ ಕುಚಿನಾಡರವರು ಪತ್ರಿಕಾ ಪ್ರಕಟಣೆಯ ಮೂಲಕ ನೊಂದ ಜನರ ಗಮನಕ್ಕೆ ತರಲು ಬಯಸಿದ್ದಾರೆ. ಅಲ್ಲದೇ ಅನುದಾನ ನೀಡಿದ ಅಂತರಾಷ್ಟ್ರೀಯ ಸಂಸ್ಥೆಯನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

RELATED ARTICLES  ಕುಮಟಾದಲ್ಲಿ ಪ್ರಾರಂಭಗೊಂಡಿತು ಜನೌಷಧಿ ಕೇಂದ್ರ:ಅತ್ಯಲ್ಪ ಬೆಲೆಗೆ ಜನತೆಗೆ ಸಿಗಲಿದೆ ಉತ್ತಮ ಗುಣಮಟ್ಟದ ಔಷಧಗಳು.