ಕುಮಟಾ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕರುನಾ ಪ್ರಕರಣಗಳು ಹೆಚ್ಚುತ್ತಿದ್ದು ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸುತ್ತಿದೆ. ಒಂದೆಡೆ ಮಳೆಯ ಆರ್ಭಟ ಮುಂದುವರಿದರೆ ಇನ್ನೊಂದೆಡೆ ಕೊರೋನಾ ಕೂಡಾ ಹೆಚ್ಚುತ್ತಿದ್ದು ಜನತೆಗೆ ತಲೆನೋವಾಗಿ ಪರಿಣಮಿಸಿದೆ.
ತಾಲೂಕಿನಲ್ಲಿ ಇಂದು 30 ಜನರಲ್ಲಿ ಕರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ನಿನ್ನೆಯ ಕೆಲವು ವರದಿಗಳು ಹೆಲ್ತ್ ಬುಲೆಟಿನ್ ನಲ್ಲಿ ಸೇರಲಿದ್ದು ಇಂದು ಕುಮಟಾದಲ್ಲಿ ಹೆಚ್ಚು ಪ್ರಕರಣ ಗುರ್ತಿಸಲ್ಪಟ್ಟಿದೆ. ತಾಲೂಕಿನ ವರದಿಯಂತೆ ಮಿರ್ಜಾನದ 60 ವರ್ಷದ ವೃದ್ಧ, 65 ವರ್ಷದ ವೃದ್ಧೆ, 29 ವರ್ಷದ ಪುರುಷ, 33 ವರ್ಷದ ಪುರುಷ, 29 ವರ್ಷದ ಯುವತಿ, 28 ವರ್ಷದ ಪುರುಷ, 22 ವರ್ಷದ ಪುರುಷ, 51 ವರ್ಷದ ಮಹಿಳೆ, ಗೋಕರ್ಣದ 45 ವರ್ಷದ ಪುರುಷ, 25 ವರ್ಷದ ಯುವಕ, ಗೋಕರ್ಣದ ತಾರಮಕ್ಕಿಯ 69 ವರ್ಷದ ವೃದ್ಧ, ಹಿರೆಗುತ್ತಿಯ 3 ವರ್ಷದ ಮಗು, ಕೊಡ್ಕಣಿಯ 71 ವರ್ಷದ ವೃದ್ಧೆ ಉಪ್ಪಿನಪಟ್ಟಣದ 52 ವರ್ಷದ ಪುರುಷ, ಕುಮಟಾ ಮೀನು ಮಾರುಕಟ್ಟೆಯ ಸಮೀಪದ 69 ವರ್ಷದ ಪುರುಷ, ಅಳ್ವೇಕೋಡಿಯ 58 ವರ್ಷದ ಮಹಿಳೆ, ಸಿದ್ದನಬಾವಿಯ 63 ವರ್ಷದ ಪುರುಷ, ಸಿದ್ದನಬಾವಿಯ 55 ವರ್ಷದ ಮಹಿಳೆ, ಹಂದಿಗೋಣದ 38 ವರ್ಷದ ಪುರುಷ, ಬಗ್ಗೋಣದ 83 ವರ್ಷದ ವೃದ್ಧ, ಚಿತ್ರಗಿಯ 32 ವರ್ಷದ ಪುರುಷ, ಚಿತ್ರಗಿಯ 44 ವರ್ಷದ ಪುರುಷ, ಮಾಸ್ತಿಹಳ್ಳದ 26 ವರ್ಷದ ಯುವತಿ ಗುಜ್ಜರಗಲ್ಲಿಯ 38 ವರ್ಷದ ಪುರುಷ, ಶಿರಗುಂಜಿಯ 58 ವರ್ಷದ ಮಹಿಳೆ, ಕುಮಟಾದ 79 ವರ್ಷದ ವೃದ್ಧ, 59 ವರ್ಷದ ಪುರುಷ, 54 ವರ್ಷದ ಪುರುಷ, 64 ವರ್ಷದ ಮಹಿಳೆ, 58 ವರ್ಷದ ಮಹಿಳೆ ಸೇರಿ 30 ಪ್ರಕರಣ ದಾಖಲಾಗಿದೆ.