ಯಲ್ಲಾಪುರ ; ಸಮೀಪದ ಕನಕನಹಳ್ಳಿಯ ವಿಜಯ ವಿನಾಯಕ ಯುವಕ ಸಂಘದ ವಾರ್ಷಿಕ ಗಣೇಶೋತ್ಸವದ ಅಂಗವಾಗಿ ಆ 28 ರಂದು ರಾತ್ರೆ ಆಹ್ವಾನಿತ ಕಲಾವಿದರಿಂದ ಕೌರವನ ದುರಂತ ಕಥೆಯನ್ನು ಸಾರುವ ಛಲದಂಕ ಚಕ್ರೇಶ್ವರ ಯಕ್ಷಗಾನ ಆಖ್ಯಾನ ಪ್ರದರ್ಶನಗೊಂಡಿತು.

ಕೌರವನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ 84 ರ ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂಧ್ರ ಹೆಗಡೆ ರವರು ತಮ್ಮ ಅಭಿನಯ ಚಾತುರ್ಯದಿಂದ ಪ್ರೇಕ್ಷಕರನ್ನು ಸಾಕ್ಷಾತ್ ಕುರುಕ್ಷೇತ್ರಕ್ಕೇ ಕರೆದೊಯ್ದರು.
“ಕುರುರಾಯ ಇದನೆಲ್ಲ ಕಂಡು … ಒಳಸರಿದನು …” ಕೌರವನ ದುರಂತ ಕಥೆಯನ್ನು ವೈಶಂಪಾಯನ ಸರೋವರದಲ್ಲಿ ಅಡಗುವವರೆಗೆ ಚಿಟ್ಟಾಣಿ ಹೆಗಡೆ ರವರು ಅಭಿನಯಿಸಿದ ರೀತಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವವೇ ಹೆಚ್ಚಾಯಿತೋ ಎಂಬಂತೆ ಭಾಸವಾಯಿತು. ತಮ್ಮ ಹಾವ- ಭಾವ, ಕುರುಕ್ಷೇತ್ರ ರಣಾಂಗಣದಲ್ಲಿ ಹೆಣಗಳನ್ನು ದಾಟಿಕೊಂಡು ಸಾಗುವ ಪ್ರತೀ ಹಂತವನ್ನೂ ಚಿಟ್ಟಾಣಿ ಅಭಿನಯಿಸಿದ ರೀತಿಗೆ ಅವರೇ ಸಾಟಿ ಎಂಬಂತಿತ್ತು.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ 89 ಜನರಲ್ಲಿ ಕೊರೋನಾ ಪಾಸಿಟೀವ್ : 39 ಜನ ಗುಣಮುಖರಾಗಿ ಡಿಶ್ಚಾರ್ಜ

ಕೌರವನ ಮುಂದುವರೆದ ಭಾಗವನ್ನು ಈಶ್ವರ ನಾಯ್ಕ ಮಂಕಿ ಸಮರ್ಥವಾಗಿ ನಿಭಾಯಿಸಿದರು. ಕೃಷ್ಣನ ಪಾತ್ರದಲ್ಲಿ ಸದಾಶಿವ ಮಲವಳ್ಳಿ, ಧರ್ಮರಾಯನಾಗಿ ಶ್ರೀಪಾದ ಬೆಳ್ಳಿ, ಭೀಮನಾಗಿ ಶ್ರೀಪಾದ ಹೆಗಡೆ ಹಡಿನಬಾಳ, ಬೇಹಿನಚರನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಶಿವಪ್ರಸಾದ ನಾಯ್ಕ, ಶಿವರಾಮ ಹೆಗಡೆ ಮುಂತಾದವರು ಪ್ರಸಂಗಕ್ಕೆ ರಂಗು ತಂದರು. ಹಿಮ್ಮೇಳದಲ್ಲಿ ಭಾಗವತಿಕೆಯ ದ್ವಂದ್ವ ಹಾಡುಗಾರಿಕೆಯಲ್ಲಿ ಪ್ರಸನ್ನ ಬಟ್ಟ ಬಾಳಕಲ್, ಮತ್ತು ರವೀಂದ್ರ ಭಟ್ ಅಚವೆ ತಮ್ಮ ಕಂಠಸಿರಿಯಿಂದ ಮೆರಗು ತಂದರೆ, ಮದ್ದಳೆಯಲ್ಲಿ ಕವಾಳೆ ಗಣಪತಿ ಭಟ್ಟರು ಹಾಗೂ ಚಂಡೆಯಲ್ಲಿ ಗಣೇಶ್ ಗಾಂವ್ಕರ ಕನಕನಹಳ್ಳಿ ಉತ್ತಮವಾಗಿ ಸಹಕರಿಸಿದರು.

RELATED ARTICLES  ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಅಧಿಕೃತ ಆಂಡ್ರಾಯ್ಡ್ ಮೊಬೈಲ್ ಆಪ್ ಲೋಕಾರ್ಪಣೆ