ಯಲ್ಲಾಪುರ: ನಗರದಲ್ಲಿ ಬುಧವಾರ 7 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 543 ಕ್ಕೆ ತಲುಪಿದೆ.
ಇಂದು ಶಿರನಾಲಾ, ಕೊಡಸೆ, ತುಡಗುಣಿಗಳಲ್ಲಿ ತಲಾ ಒಬ್ಬರಿಗೆ ಹಾಗೂ ಕೋಟೆಮನೆಯ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಸದ್ಯ 85 ಸಕ್ರಿಯ ಪ್ರಕರಣಗಳಿವೆ. ಇಂದು 54 ಜನರಿಗೆ ತಪಾಸಣೆ ನಡೆಸಲಾಗಿದ್ದು, ಅವರ ವರದಿ ಬರಬೇಕಾಗಿದೆ. ಈವರೆಗೆ 6444 ಜನರಿಗೆ ತಪಾಸಣೆ ನಡೆಸಲಾಗಿದ್ದು, 5517 ಜನರಿಗೆ ನೆಗೆಟಿವ್ ಬಂದಿದೆ. ಈವರೆಗೆ ಒಟ್ಟೂ ನಾಲ್ಕು ಮಂದಿ ಮೃತರಾಗಿದ್ದಾರೆ.
- ಹೆಚ್ಚುತ್ತಲೇ ಇದೆ ಕೊರೋನಾ, ಇರಲಿ ಎಚ್ಚರ