ಕುಮಟಾ : ಪ್ರಖ್ಯಾತ ಮೊಬೈಲ್ ಬಿಡಿ ಭಾಗಗಳನ್ನು ಜೋಡಿಸುವ ಸಂಸ್ಥೆ, ತೈವಾನ್ ಮೂಲದ ವಿಸ್ಟಾನ್ ಇನ್ನೋಕಾಮ್ ಮ್ಯಾನುಫ್ಯಾಕ್ಟರಿಂಗ ಇಂಡಿಯಾ ಪ್ರೈವೇಟ್ ಲಿಮಿಟೆಡ್ ದೇಶದಲ್ಲಿ ತನ್ನ ಉತ್ಪಾದನಾ ಘಟಕವನ್ನು ಕರ್ನಾಟಕದ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ವಲಯದಲ್ಲಿ ಪ್ರಾರಂಭಿಸಿದೆ. ಪಿ.ಯು.ಸಿ., ಡಿಗ್ರಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಬಿ.ಇ. ಎಲೆಕ್ಟಿಕಲ್/ ಎಲೆಕ್ಟೋನಿಕ್ಸ್ ಮತ್ತು ಕಮ್ಯುನಿಕೇಷನ್, ಮೆಕಾನಿಕಲ್ ಇಂಜಿನಿಯರಿಂಗ್ ಪ್ರೇಶರ್ ಹಾಗೂ ಅನುಭವವುಳ್ಳ ವಿದ್ಯಾರ್ಥಿಗಳಿಿಗೆ (ಯುವಕ/ ಯುವತಿ) NEEDS ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳಲಿದೆ.
ಆಸಕ್ತರು ಇದೇ ದಿನಾಂಕ 25-09-2020ರಂದು
ಐ.ಟಿ.ಐ. & ಡಿಪ್ಲೋಮಾ ಅಭ್ಯರ್ಥಿಗಳು ಹಾಗೂ 26-09-2020ರಂದು ಪಿ.ಯು.ಸಿ. & ಡಿಗ್ರಿ ವಿದ್ಯಾರ್ಥಿಗಳು ಸರಿಯಾಗಿ 9 ಗಂಟೆಗೆ ತಮ್ಮ ಬಯೋಡಾಟಾ ಹಾಗೂ ಮೂಲ ದಾಖಲೆಗಳೊಂದಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರ, ವಿದ್ಯಾಗಿರಿ, ಕಲಬಾಗ, ಕುಮಟಾದಲ್ಲಿ ಹಾಜರಿರಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮನೋಜ ನಾಯ್ಕರನ್ನು ಸಂಪರ್ಕಿಸಬಹುದು. ಮೋ .: 8971233375, 9481983375
ಮಾಸ್ಟ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.
ದೂರದ ಪಟ್ಟಣಗಳಿಂದ ಬರುವವರಿಗೆ ಕುಮಟಾ ಬಸ್ ನಿಲ್ದಾಣದಿಂದ ಬೆಳಿಗ್ಗೆ 9:00 ಘಂಟೆಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.