ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಕರ್ಣದ ಮಾಣೇಶ್ವರ ದೇವಸ್ಥಾನದ ಮೇಲ್ಬಾಗದಲ್ಲಿರುವ ಗುಡ್ಡ ಕುಸಿದಿದ್ದು ಈವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ. ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ.
ಪಕ್ಕದಲ್ಲೇ ಮನೆಗಳಿದ್ದು ಗುಡ್ಡದ ಬಲಭಾಗಕ್ಕೆ ಜಾರಿದಲ್ಲಿ ಮನೆಯ ಮೇಲೆ ಬೀಳುತಿತ್ತು. ಹಾಗೆಯೃ ಎಡಭಾಗಕ್ಕೆ ಜಾರಿದ್ದಲ್ಲಿ ದೇವಸ್ಥಾನದ ಮೇಲೆ ಬೀಳುತಿತ್ತು. ಆದರೆ ಕುಸಿತವಾದ ಪಕ್ಕದಲ್ಲೇ ಬೃಹದಾಕಾರದ ಮರವಿದ್ದ ಕಾರಣ ಗುಡ್ಡದಿಂದ ಜಾರಿದ ಕಲ್ಲುಬಂಡೆಯು ಮರದ ಬಳಿ ನಿಂತಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.