ಹೊನ್ನಾವರ : ತಾಲೂಕಿನಲ್ಲಿ ನಿತ್ಯವೂ ಕರೋನಾ ಕೇಸ್ಗಳು ದಾಖಲಾಗುತ್ತಿದ್ದು ಇಂದು ಕೂಡ ಅಂತೆಯೇ ಮುಂದುವರೆದಿದೆ. ಇಂದು 16 ಕರೊನಾ ಕೇಸ್ ದಾಖಲಾಗಿದೆ.
ಪಟ್ಟಣದ ಕಮಟೆಹಿತ್ಲದ 45 ವರ್ಷದ ಪುರುಷ, ಕೆ ಎಚ್ ಬಿ ಕಾಲೋನಿಯ 28 ವರ್ಷದ ಯುವಕ, ಗ್ರಾಮೀಣ ಭಾಗವಾದ ಮಂಕಿ ಬಣಸಾಲೆಯ 44 ವರ್ಷದ ಪುರುಷ, 58 ವರ್ಷದ ಪುರುಷ, 54 ವರ್ಷದ ಮಹಿಳೆ, 56 ವರ್ಷದ ಮಹಿಳೆ, ನವಾಯತ ಕಾಲೋನಿಯ 31 ವರ್ಷದ ಯುವತಿ, ಮಂಕಿ ಕೋಪ್ಪದಮಕ್ಕಿಯ 45 ವರ್ಷದ ಮಹಿಳೆ, 60 ವರ್ಷದ ಪುರುಷ, 30 ವರ್ಷದ ಯುವಕ, 45 ವರ್ಷದ ಮಹಿಳೆ, ಚಿಕ್ಕನಕೋಡದ 49 ಪುರುಷ, ಖರ್ವಾದ 38 ವರ್ಷದ ಪುರುಷ, ಕುಳಕೋಡದ 48 ವರ್ಷದ ಪುರುಷ, ತಲಗೋಡಿನ 52 ವರ್ಷದ ಪುರುಷ ನಿಗೆ ಸೋಂಕು ದೃಢಪಟ್ಟಿದೆ.
ಗ್ರಾಮೀಣಭಾಗದಲ್ಲಿಯೆ ಅತಿಹೆಚ್ಚ ಪ್ರಕರಣ ದಾಖಲಾಗಿದೆ, ಮಂಕಿ ವ್ಯಾಪ್ತಿಯಲ್ಲೇ ಆರು ಕೇಸ್, ಉಳಿದಂತೆ ತಲಗೋಡ, ಖರ್ವಾ, ಚಿಕ್ಕನಕೋಡ, ಕುಳಕೋಡ ಭಾಗದಲ್ಲಿ ಸೋಂಕು ದೃಢಪಟ್ಟಿದೆ.