ಕುಮಟಾ: ಸಣ್ಣ ದಾನಕ್ಕೂ ತಮ್ಮ ಹೆಸರನ್ನು ಶಿಲೆಗಲ್ಲಿನ ಮೇಲೆ ಕೆತ್ತಿಸಿಕೊಳ್ಳುವವರಿಗೆ ವಿರುದ್ಧವಾಗಿ ಎಷ್ಟೇ ಸಮಾಜ ಸೇವೆ ಮಾಡಿದರೂ ಪ್ರಚಾರ ಬಯಸದ ದಿ.ಮೋಹನ ಹೆಗಡೆಯವರು ತಮ್ಮ ಕಾರ್ಯಗಳ ಮೂಲಕವೇ ಅಜರಾಮರವಾಗಿದ್ದಾರೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ರವೀಂದ್ರ ಭಟ್ಟ ಸೂರಿ ಹೇಳಿದರು.

ಅವರು ಹೊಲನಗದ್ದೆಯಲ್ಲಿ ಕಾಂಚಿಕಾಂಬಾ ವಲಯದ ಹವ್ಯಕ ಬಾಂಧವರಿಂದ ಗುರುವಾರ ಹಮ್ಮಿಕೊಂಡ ಸನ್ಮಾನ ಸಮಾರಂಭ ಹಾಗೂ ದಿ.ಮೋಹನ ಹೆಗಡೆಯವರಿಗೆ ಪುಷ್ಪಮನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಸೈನ್ಸ್ ಲ್ಯಾಬ್ ಇರುವುದು ರಾಜ್ಯದಲ್ಲೇ ಮೊದಲು ನಮ್ಮ ಹೊಲನಗದ್ದೆ ಶಾಲೆಯೆಂಬುದು ಹೆಮ್ಮೆಯಿದೆ. ಸಮೂಹ ಮಾಧ್ಯಮಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದು ನನ್ನ ಸಾಧನೆಗೆ ಕಾರಣವಾಗಿರಬಹುದು.
ಸಾರ್ವಜನಿಕರಿಂದ ಶಾಲೆಯ ಅಭಿವ್ರದ್ಧಿಗೆ ಸಹಾಯ ಸಿಕ್ಕರೆ ಸನ್ಮಾನಕ್ಕಿಂತ ಹೆಚ್ಚು ಸಂತಸ ತರುವ ವಿಷಯವಾಗಿದೆ. ಶಾಲೆಯು ಆಕರ್ಷಣೀಯವಾಗಲು ಎಲ್ಲಾ ಬಗೆಯ ಸೌಕರ್ಯಗಳನ್ನು ಹೊಂದಿರಬೇಕು. ಈ ನಿಟ್ಟಿನ ಪ್ರಯತ್ನದಲ್ಲಿ ಯಶಸ್ಸು ಕಾಣಲು ಪ್ರಮುಖರಾದ ಎಲ್ಲಾ ಸಹಾಯಕರನ್ನೂ ಸ್ಮರಿಸಲೇಬೇಕು ಎಂದರು.

RELATED ARTICLES  ಹಸುವನ್ನು ಕಡಿಯುತ್ತಿರುವಾಗಲೇ ಪೊಲೀಸ್ ದಾಳಿ

ಮೋಹನ ಹೆಗಡೆಯವರ ಅಗಲಿಕೆ ತುಂಬಾ ನೋವು ತಂದಿದ್ದು ಅವರ ಸಮ್ಮುಖದಲ್ಲಿ ಈ ಗೌರವ ಪಡೆದುಕೊಳ್ಳಲಾಗಲಿಲ್ಲವೆಂಬ ನೋವಿದೆ. ಶಾಲೆಯ ಅಭಿವ್ರದ್ಧಿಯಲ್ಲಿ ಅವರ ಸಹಾಯವೂ ಮಹತ್ವದ್ದಾಗಿದೆ. ನಿವ್ರತ್ತಿಯೊಳಗೆ ನಮ್ಮ ಶಾಲೆಯನ್ನು ಮತ್ತೊಂದು ಮಟ್ಟಕ್ಕೆ ಕರೆದೊಯ್ಯುವ ಮಹದಾಸೆಯಿದೆ. ವೈಯಕ್ತಿಕ ಗೌರವಕ್ಕಿಂತ ನಮ್ಮ ಶಾಲೆಗೆ ರಾಜ್ಯಮಟ್ಟದ ಪ್ರಶಸ್ತಿ ಬಂದರೆ ಸಂಪೂರ್ಣ ತ್ರಪ್ತಿ ಸಿಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್.ಎನ್.ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿ ಒಂದೇವರ್ಷದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವುದು ಇದೇ ಮೊದಲಾಗಿದ್ದು ಅಪ್ರತಿಮ ಸಾಧನೆಯೆಂದೇ ಇದನ್ನು ಬಣ್ಣಿಸಬಹುದಾಗಿದೆ. ಶೈಕ್ಷಣಿಕವಾಗಿಯಷ್ಟೇ ಅಲ್ಲದೇ ಅವರಲ್ಲಿನ ಸಾಮಾಜಿಕ, ಧಾರ್ಮಿಕ ಸ್ಪಂದನೆಯು ಅಮೋಘವಾದುದು. ಸಕಲ ಗೌರವಕ್ಕೂ ಅರ್ಹರಾಗಿರುವ ಸೂರಿಯವರಿಗೆ ರಾಷ್ಟ್ರಪ್ರಶಸ್ತಿಯೂ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

RELATED ARTICLES  ತಿಲಕ ಯುವಕ ಮಂಡಳ ಹಾಗೂ ಸಿಂಚನ ಯುವತಿ ಮಂಡಳದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಮಂಕಾಳ ವೈದ್ಯ.

ಮಹಾದೇವಿ ಎಸ್. ಭಟ್ಟ ಉದ್ಘಾಟಿಸಿದರು. ಆರ್.ಎನ್ ಹೆಗಡೆ ಸ್ವಾಗತಿಸಿ ವಂದಿಸಿದರು. ಎಂ.ಎನ್.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ದಿ.ಮೋಹನ ಹೆಗಡೆಯವರಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ವಿಷಯವಾಗಿ ಮಾತನಾಡಿದ ಎಸ್.ಎಸ್.ಹೆಗಡೆ ಅವರು, ಮೋಹನ ಹೆಗಡೆಯವರು ಸಾಮಾಜಿಕ ಸೇವಕರಾಗಿ ಎಲ್ಲಾ ವರ್ಗದ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶಿಕ್ಷಕರಾಗಿ, ಕ್ರಷಿಕರಾಗಿ, ಸಮಾಜ ಸುಧಾರಕರಾಗಿ ಬದುಕು ನಡೆಸಿದ ಶ್ರೇಷ್ಠ ವ್ಯಕ್ತಿತ್ವ ಅವರದ್ದಾಗಿದೆ. ಅಗ್ರಪಂಕ್ತಿಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ಇಡೀ ಹವ್ಯಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.