ಕುಮಟಾದಲ್ಲಿ 10 ಕರೊನಾ ಪಾಸಿಟಿವ್ ಪ್ರಕರಣ ಪತ್ತೆ
ಯಲ್ಲಾಪುರದಲ್ಲಿಂದು 23 ಮಂದಿಗೆ ಕೊರೊನಾ
ಶಿರಸಿಯಲ್ಲಿ 43 ಕೇಸ್..!
ಕುಮಟಾ: ತಾಲೂಕಿನ ನೆಲ್ಲಿಕೇರಿಯ 56 ವರ್ಷದ ಮಹಿಳೆ, ಮಿರ್ಜಾನ್‌ನ 47 ವರ್ಷದ ಪುರುಷ, ಬೆಟ್ಗೇರಿಯ 70 ವರ್ಷದ ವೃದ್ಧೆ, ಹೆಗಡೆಯ 40 ವರ್ಷದ ಪುರುಷ, ಹೆರವಟ್ಟಾದ 65 ವರ್ಷದ ಪುರುಷ, ಗೋಕರ್ಣದ 22 ವರ್ಷದ ಯುವಕ, ಕಾಗಲ್‌ನ 12 ವರ್ಷದ ಬಾಲಕಿ, 1 ವರ್ಷದ ಮಗು, 40 ವರ್ಷದ ಮಹಿಳೆ, ಕಲ್ಲಬ್ಬೆಯ 69 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆಯಾಗಿದೆ.
ಶನಿವಾರ ಒಟ್ಟು 10 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1020ಕ್ಕೆ ಏರಿಕೆಯಾಗಿದೆ.
ಯಲ್ಲಾಪುರದಲ್ಲಿಂದು 23 ಮಂದಿಗೆ ಕೊರೊನಾ ದೃಢ
ಯಲ್ಲಾಪುರ: ತಾಲೂಕಿನಲ್ಲಿ ಇಂದು 23 ಜನರಿಗೆ ಕೊರೊನಾ ಧೃಢಪಟ್ಟಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 96 ಕ್ಕೆ ಏರಿದೆ.
ರವಿವಾರ ಯಲ್ಲಾಪುರದ ಶ್ರೀರಾಮ ಎಜೆನ್ಸಿ ಬಳಿ, ಗ್ರಾಮೀಣ ಭಾಗದ ಮಾದನಸರ, ಹುಣಶೆಟ್ಟಿಕೊಪ್ಪ, ಹುಲಗೋಡ, ಬೈಲಂದೂರು ಗೌಳಿವಾಡಗಳಲ್ಲಿ ತಪಾಸಣಾ ಶಿಬಿರ ನಡೆಯಲಿದೆ. ಕಳೆದ ನಾಲ್ಕಾರು ದಿವಸಗಳಿಂದ ಯಲ್ಲಾಪುರ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್ ಲಭ್ಯವಿರಲಿಲ್ಲ. ಹಾಗಾಗಿ ರ್ಯಾಪಿಡ್ ಟೆಸ್ಟ್ ನಡೆಯುತ್ತಿರಲಿಲ್ಲ. ಇಂದಿನಿಂದ ಮತ್ತೆ ಆರಂಭವಾಗಿದೆ.
ಶಿರಸಿಯಲ್ಲಿ 43 ಕೇಸ್ ದೃಢ
ತಾಲೂಕಿನಲ್ಲಿ ಶುಕ್ರವಾರ 43 ಕೇಸ್ ದೃಢಪಟ್ಟಿದೆ. ಕುಳವೆ 1, ಬೆಟ್ಟಕೊಪ್ಪ 5, ಅಗಸೆ ಬಾಗಿಲು 1, ಅಯ್ಯಪ್ಪ ನಗರದಲ್ಲಿ 1, ಬಸವೇಶ್ವರ ಕಾಲೋನಿಯಲ್ಲಿ 1, ಕೋಟೆಗಲ್ಲಿಯಲ್ಲಿ 1, ಗಣೇಶ ನಗರ 1,ಬಾಪುಜಿ ನಗರ 1, ದುಂಡಶಿ ನಗರ 2, ರಾಯರಪೇಟೆ 1, ಮಾರುತಿ ಗಲ್ಲಿ 1, ಸಿಂಪಿಗಲ್ಲಿ 1, ನಿಲೇಕಣಿ 4, ಮುಸ್ಲಿಂ ಗಲ್ಲಿ 1, ವೀರಭದ್ರ ಗಲ್ಲಿಯಲ್ಲಿ 7, ಹನುಮಂತಿ 1, ಬನವಾಸಿ ರೋಡ್, ಕಂಚಿಗದ್ದೆ 1, ಬಿಸಲಕೊಪ್ಪ 1, ಮಾರಿಕಾಂಬಾ ನಗರ 2, ಪೋಲಿಸ್ ಕ್ವಾಟರ್ಸ್ 1, ಗೋಸಾವಿ ಕೆರೆ ಸೇರಿದಂತೆ ಹಲವೆಡೆ ಸೋಂಕು ಕಾಣಿಸಿಕೊಂಡಿದೆ.